Wednesday, 3 March 2010

ಜುಜುಬಿ ರಾಯಲ್ಟಿಗೆ ಅದಿರು ರಫ್ತು..ಐದು ವರ್ಷಗಳ ಲೆಕ್ಕ ಇಲ್ಲಿದೆ !


ವಿ.ಕದಲ್ಲಿ ಪ್ರಕಟವಾದ ಗಣಿಗಾರಿಕೆ ಕುರಿತ ಲೇಖನ. ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ

Monday, 1 March 2010

ವಿಜಯ ಕರ್ನಾಟಕ ಕಚೇರಿಯಲ್ಲಿ ಹೋಳಿ ಸಂಭ್ರಮ..





















ಈವತ್ತು (ಮಾರ್ಚ್ ೧) ವಿಜಯ ಕರ್ನಾಟಕ ಕಚೇರಿಯಲ್ಲಿ ಹೋಳಿ ಹಬ್ಬ ಆಚರಿಸುವ ಉಮೇದು ಹಲವರಿಗೆ ಬಂದು ಬಿಟ್ಟಿತು. ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ಟರು ಎರಡು ದಿನಗಳ ಮೊದಲೇ ಸೂಚನೆ ಕೊಟ್ಟಿದ್ದರು. ಹೋಳಿ ಹಬ್ಬಕ್ಕೆ ಅವಕಾಶ ಇದೆ. ಆದರೆ ಕಚೇರಿ ಒಳಗೆ ಬಣ್ಣಗಳನ್ನು ಕಂಪ್ಯೂಟರ್, ಟೇಬಲ್ ಮೇಲೆ ಎಲ್ಲ ಚೆಲ್ಲುವ ಹಾಗೆ ಆಗಬಾರದು ಎಂದು ಸೂಕ್ಷ್ಮವಾಗಿ ತಿಳಿಸಿದ್ದರು.
ಅದರಂತೆ ಸಹೋದ್ಯೋಗಿಗಳಲ್ಲಿ ಕೆಲವರು ಹೋಳಿಯ ಸಂಭ್ರಮಕ್ಕೆ ಚಾಲನೆ ಕೊಟ್ಟರು. ಕೆಲವರು ಸಂಕೋಚದಿಂದ ಅವರವರ ಡೆಸ್ಕ್‌ನಲ್ಲಿ ಕುಳಿತು ಕೆಲಸದಲ್ಲಿ ಮುಳುಗಿದ್ದರು. ಅವರನ್ನೆಲ್ಲ ಉಳಿದವರು ಬರ‍್ಲೇ ಬೇಕು ಅಂತ ಒತ್ತಾಯಿಸಿ, ಕೈಹಿಡಿದು ಎಬ್ಬಿಸಿ, ಕೆಲವರಿಗೆ ಬೈದು (ಖುಷಿಯಲ್ಲಿ) ಕಚೇರಿಯ ಆವರಣದಲ್ಲಿ ಬಣ್ಣದೋಕುಳಿ ಮಾಡಿಸಲಾಯಿತು. ದೀಪಾ ಹಾಗೂ ಭದ್ರತಾ ಸಿಬ್ಬಂದಿಯವರಂತೂ ಸಿಕ್ಕಾಪಟ್ಟೆ ಒತ್ತಾಯ ಮಾಡುತ್ತಿದ್ದರು.ನಮ್ಮ ನೆರೆಯವರಾದ ಬೆಂಗಳೂರು ಮಿರರ್‌ನ ಸಿಬ್ಬಂದಿ ಕೂಡ ಭಾಗವಹಿಸಿದ್ದರು.
ಸ್ವಲ್ಪ ಹೊತ್ತಿನಲ್ಲಿ ತಮಾಷಿಗಳೂ ಜರುಗಿ ಹೋದವು. ಪ್ರತಾಪ್ ಸಿಂಹ ಗುರುತೇ ಸಿಗದಂತೆ ಓಡಾಡುತ್ತಿದ್ದರು. ಸಹೋದ್ಯೋಗಿಗಳನ್ನು ಆಫೀಸಿನ ಹೊರಗಿನಿಂದಲೇ ಕಿರುಚಿ ಕೂಗುತ್ತಿದ್ದರು. ಕೆಲವರು ಓಗೊಟ್ಟು ಹೊರಗೆ ಬರುತ್ತಿದ್ದರು. ಬಂದ ಕೂಡಲೇ ಬಣ್ಣದಿಂದ ಮಜ್ಜನ. ನಾನು ಕೂಡ ಏನು ನಡೆಯುತ್ತಿದೆ ಅಂತ ಎದ್ದು ಬಾಗಿಲಿನ ಕಡೆಗೆ ಹೋದೆ. ಅದೇ ತಪ್ಪಾಯಿತು..ಪ್ರತಾಪ್ ಸಿಂಹ ಬನ್ನಿ ರೀ..ಹೋಗಿ ರೀ..ಅಂತ ಕರೆದರು. ಕೈಯಲ್ಲಿ ಬಣ್ಣದ ಲಕೋಟೆ ಹಿಡಿದಿದ್ದರು. ಒಮ್ಮೆ ಬಾಗಿಲಿನಿಂದ ಹೊರಗೆ ಕಾಲಿಟ್ಟಿದ್ದೇ ತಡ, ಮುಖ, ತಲೆಗೆಲ್ಲ ಬಣ್ಣ ಎರಚಿದರು. ಇತರ ಸಹೋದ್ಯೋಗಿಗಳೂ ಸಾಕಷ್ಟು ಕೊಡುಗೆ ಕೊಟ್ಟರು. ಅವರ ಉತ್ಸಾಹದಲ್ಲಿ ಪಾಲ್ಗೊಂಡೆ. ನನ್ನ ಬೆನ್ನ ಹಿಂದೆ ಸುವರ್ಣ ಮೇಡಂ ಬಂದರು. ಅವರಿಗೂ ಬಣ್ಣದ ಸುರಿಮಳೆಯಾಯಿತು..ಒಟ್ಟಾರೆ ಕಚೇರಿಯಲ್ಲಿ ಐದಾರು ಮಂದಿಗೆ ಬಿಟ್ಟು ಉಳಿದವರಿಗೆಲ್ಲ ಹೋಳಿ ಬಣ್ಣದಲ್ಲಿ ಮುಳುಗಿಯಾಗಿತ್ತು. ಅಷ್ಟು ಹೊತ್ತಿಗೆ ನನಗೆ ಕ್ಯಾಮೆರಾ ನೆನೆಪಾಯಿತು. ಬ್ಯಾಗಿನಿಂದ ತೆಗೆದು ಚಿತ್ರಗಳನ್ನು ಸೆರೆಹಿಡಿದೆ. ಕಳೆದ ಐದು ವರ್ಷಗಳಿಂದ ವಿಜಯ ಕರ್ನಾಟಕ ಕಚೇರಿಯಲ್ಲಿದ್ದೇನೆ. ಆದರೆ ಈ ಸಲದ ಹೋಳಿ ವ್ಯಾಪಕವಾಗಿತ್ತು ಎಂದು ಅನ್ನಿಸುತ್ತಿದೆ. ಅಂದಹಾಗೆ ಆಗ ಸೆರೆ ಹಿಡಿದ ಚಿತ್ರಗಳಲ್ಲಿ ಕೆಲವು ಇಲ್ಲಿವೆ.

ಈ ಚಿತ್ರಗಳಲ್ಲಿ ಸಹೋದ್ಯೋಗಿ ಮಿತ್ರರಾದ ರಮೇಶ್, ವಿನಯ್.ನ, ಸುದರ್ಶನ್ ಚೆನ್ನಂಗಿಹಳ್ಳಿ, , ಎಂ.ಆರ್. ದಿಂಡಲ್‌ಕೊಪ್ಪ,ಮಹೇಶ್ ಯಲಗೋಡಮನೆ, ಯಶೋದಾ, ಎಲ್.ಪ್ರಕಾಶ್,ರಾಘವೇಂದ್ರ ಭಟ್, ಪ್ರಕಾಶ್ ಅಂತಾಪುರ,ರಮೇಶ್‌ಕುಮಾರ್ ನಾಯಕ್,ಪ್ರೇಮ್‌ಕುಮಾರ್, ಸುರೇಶ್,ಮಹೇಶ್, ಸಾಧು ಶ್ರೀನಾಥ್, ಬಸವರಾಜ್ ಭಾಷಾ ಗೂಳ್ಯಂ, ಪ್ರತಾಪ್ ಸಿಂಹ,ಹರೀಶ್ ಕೇರ ಯಶೋಧರ ಕೋಟ್ಯಾನ್ ಸೀತಾರಾಮ ಮಯ್ಯ,, ವಿನಾಯಕ ಶಶಿವಾಳ ಪ್ರೇಮ್ರಾಜ್ ಇದ್ದಾರೆ

Sunday, 28 February 2010

ಕಪ್ಪುದ್ರಾಕ್ಷಿಯ ಕರುಣಾಜನಕ ಕಥೆ




ಬೆಂಗಳೂರು ಗ್ರಾಮಾಂತರದಲ್ಲಿ ಮಾತ್ರ ಬೆಳೆಯಲಾಗುತ್ತಿರುವ ಕಪ್ಪು ದ್ರಾಕ್ಷಿ ಇದೆಯಲ್ಲವೇ? ( ಬೆಂಗಳೂರು ಬ್ಲೂ ಗ್ರೇಪ್ಸ್ ) ಇದರ ಭವಿಷ್ಯವೇ ಕಪ್ಪಾಗಿದೆ. ಕಾರಣ ಮಲಯಾಳಂ ಮನೋರಮಾದ ಒಂದು ವರದಿ ಎನ್ನುತ್ತಾರೆ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದ ಪದಾಕಾರಿ ವೇಣುಗೋಪಾಲ್. ಎಂಥಾ ದುರಂತ ನೋಡಿ, ಒಂದೂ ಕಾಲು ಲಕ್ಷ ಟನ್ ದ್ರಾಕ್ಷಿಗೆ ಮಾರುಕಟ್ಟೆ ಬಿದ್ದ ಹೋಗಿದೆ. ಪ್ರತಿ ಕೆ.ಜಿಗೆ ೧೦-೧೨ ರೂ. ಇದ್ದದ್ದು, ೨ ರೂ.ಗೆ ಕುಸಿದಿದೆ. ಪ್ರತಿ ಕೆ.ಜಿ ದ್ರಾಕ್ಷಿ ಬೆಳೆಯಲು ಖರ್ಚು ೮ ರೂ. ತಗಲುತ್ತದೆ. ಹೀಗಾಗಿ ಏಳೂವರೆ ಸಾವಿರ ಕುಟುಂಬಗಳು ಸಂಕಷ್ಟದಲ್ಲಿವೆ.
ಮಲಯಾಳಂ ಮನೋರಮಾದಲ್ಲಿ ಜನವರಿಯಲ್ಲಿ ಒಂದು ವರದಿ ಪ್ರಕಟವಾಯಿತು. ಕಪ್ಪು ದ್ರಾಕ್ಷಿಯಲ್ಲಿ ಕೀಟನಾಶಕದ ಅಂಶ ಮಿತಿ ಮೀರಿದೆ ಎಂದು ಪತ್ರಿಕೆ ಬರೆಯಿತು. ಕೂಡಲೇ ಕೇರಳದಲ್ಲಿ ಕಪ್ಪು ದ್ರಾಕ್ಷಿಯ ಮಾರುಕಟ್ಟೆ ಪಾತಾಳಕ್ಕೆ ಕುಸಿಯಿತು.
ನಿಜ. ದ್ರಾಕ್ಷಿಯಲ್ಲಿ ಕೀಟನಾಶಕದ ಅಂಶ ಇದೆ. ಆದರೆ ಕಪ್ಪು ದ್ರಾಕ್ಷಿಯೊಂದೇ ಅಲ್ಲ, ಇತರ ಎಲ್ಲ ದ್ರಾಕ್ಷಿಯಲ್ಲೂ, ತರಕಾರಿಗಳಲ್ಲಿ ಕೂಡ ಸ್ವಲ್ಪ ಪ್ರಮಾಣದ ಕೀಟನಾಶಕ ಇದ್ದೇ ಇದೆ. ದ್ರಾಕ್ಷಿ ಹಣ್ಣುಗಳನ್ನಂತೂ ಕೀಟನಾಶಕಗಳಲ್ಲಿ ಅದ್ದಿ ತೆಗೆಯುವುದು ಸಾಮಾನ್ಯ. ಆದರೆ ಮಾರುಕಟ್ಟೆಗೆ ಬಂದಿಳಿಯುವ ದ್ರಾಕ್ಷಿಗಳಲ್ಲಿ ಎಷ್ಟು ಕ್ರಿಮಿನಾಶಕ ಇದೆ ಅಂತ ಗ್ರಾಹಕರು ಕಂಡುಹಿಡಿಯುವುದು ಹೇಗೆ ? ಅದಕ್ಕೊಂದು ಸುಲಭ ಪರೀಕ್ಷೆಯ ಸಾಧನ ಗ್ರಾಹಕರಿಗೆ ಸಿಗುವಂತಾಗಬಾರದೇಕೆ ? ಕೃಷಿ ವಿಜ್ಞಾನಿಗಳು ಈ ಬಗ್ಗೆ ಯಾಕೆ ಗಮನ ಹರಿಸುವುದಿಲ್ಲ ?

Thursday, 25 February 2010

ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸಮಾಧಿ ಸ್ಥಳ







ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸಮಾಧಿ ಸ್ಥಳ ಕೆಂಗೇರಿ ಸಮೀಪದ ಅಭಿಮಾನ್ ಸ್ಟೂಡಿಯೊದ ಆವರಣದಲ್ಲಿದೆ. ಹಿರಿಯ ನಟ ಬಾಲಣ್ಣನವರ ಸಮಾಧಿಯೂ ಅಲ್ಲಿದೆ. ಪ್ರತಿ ದಿನ ನೂರಾರು ಮಂದಿ ಅಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಅಂತಹ ಸಮಾಧಿ ಸ್ಥಳವನ್ನು ಆದಷ್ಟು ಬೇಗ ಅಭಿವೃದ್ಧಿಪಡಿಸಬೇಕು.
ಈವತ್ತು ವಿಷ್ಣುವರ್ಧನ್ ಸಮಾಧಿಗೆ ಭೇಟಿ ನೀಡಿದಾಗ ಒಂದು ಘಟನೆ ನಡೆಯಿತು. ಸಮಾಧಿಯ ಪಕ್ಕ ಛಾಯಾಚಿತ್ರಗಾರನೊಬ್ಬ ಕೂತಿದ್ದ. ಆತನ ಚೀಲವೂ ಅಲ್ಲಿತ್ತು. ನಾನು ನನ್ನಪಾಡಿಗೆ ಫೊಟೊ ಕ್ಲಿಕ್ಕಿಸಿದ ತಕ್ಷಣ " ಫೊಟೊ ತೆಗೆಯಬಾರದು. ಬೇಕಾದರೆ ನಾನೇ ತೆಗೆದುಕೊಡುತ್ತೇನೆ ಎಂದ..! " ಏನಿದು ? ಅಭಿಮಾನಿಗಳು ವಿಷ್ಣುವರ್ಧನ್ ಅವರ ಸಮಾಧಿಯ ಭಾವಚಿತ್ರವನ್ನೂ ಸೆರೆಹಿಡಿಯುವಂತಿಲ್ಲವೇ ? ಆತ ಬಹುಶಃ ತಾನೇ ಚಿತ್ರ ತೆಗೆದುಕೊಟ್ಟು ದುಡ್ಡು ಮಾಡುತ್ತಿದ್ದನೇ ? ನಾನು ವಿಚಾರಿಸಲು ಹೋಗಲಿಲ್ಲ. ಆದರೆ ಒಂದು ವೇಳೆ ಹಾಗೆ ಮಾಡುತ್ತಿದ್ದರೆ ಅದು ಶುದ್ಧ ತಪ್ಪು...

Tuesday, 23 February 2010

ಶಿರ್ಕೆಯ ಕೆ.ಎಚ್.ಬಿ ಅಪಾರ್ಟ್‌ಮೆಂಟ್‌ನ ಮಧ್ಯಮ ವರ್ಗದ ಜೀವನಶೈಲಿ-ಭಾಗ-೨








ಈ ಸಲ ನೀರಿನ ಟ್ಯಾಂಕಿಯ ಕಟ್ಟೆಯಲ್ಲಿ ಕುಳಿತು ಎತ್ತಲೋ ನೋಡುತ್ತಿರುವ ಬೆಕ್ಕು, ಬಾಲ್ಕನಿಯಲ್ಲಿ ವಿಶ್ರಮಿಸುತ್ತಿರುವ ಹಿರಿಯರು, ವ್ಯಾಪಾರಿ ಮಹಿಳೆ, ಲಿಂಬೆಕಾಯಿಯನ್ನು ಗೋಣಿಚೀಲದಲ್ಲಿ ತುಂಬಿ ಮಾರಾಟ ಮಾಡುತ್ತಿರುವ ವ್ಯಾಪಾರಿ, ಕಾರು ತೊಳೆಯುತ್ತಿರುವಾತ, ಬೀದಿ ಬದಿ ಸಂಕೋಲೆಯಲ್ಲಿ ಕಟ್ಟಿರುವ ನಾಯಿಯನ್ನು ಕಾಣಬಹುದು

ಕೇಂದ್ರ ಬಜೆಟ್ ಅನುಮೋದನೆ ಹೇಗೆ ?


ಬಜೆಟ್ ಮಾಲಿಕೆಯ ೧೧ನೇ ಕಂತು ಇಲ್ಲಿದೆ. ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ

Monday, 22 February 2010

ಬಜೆಟ್ ಮಾಲಿಕೆಯ ೧೦ನೇ ಕಂತು : ಪ್ಯಾಕೇಜ್ ವಾಪಸ್ ಮತ್ತು ಉದ್ಯಮಿಗಳ ರಂಪ



ಬಜೆಟ್ ಮಾಲಿಕೆಯ ೧೦ನೇ ಕಂತು ಇಲ್ಲಿದೆ. ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ