Sunday, 22 April 2012
1. ಅಭ್ಯಾಸ ಬಲವನ್ನು ಬದಲಾಯಿಸಲು ಕೂಡ ಸತತ ಅಭ್ಯಾಸ ಮಾಡಬೇಕಾಗುತ್ತದೆ. ಇಲ್ಲವಾದರೆ ಹಳೆಯ ಅಭ್ಯಾಸಗಳು ಮುಂದುವರಿಯುತ್ತವೆ. 2.ಅಭ್ಯಾಸ ಬಲದ ಮೂಲಕ ಬದುಕಿನಲ್ಲಿ ಏನನ್ನಾದರೂ ಸಾಧನೆ ಮಾಡಬಹುದು. ಹಾಗೆಯೇ ಏನನ್ನೂ ಮಾಡಿದರಲೂ ಅಭ್ಯಾಸ ಬಲವೇ ಕಾರಣವಾಗುತ್ತದೆ.
3. ಏನಾದರೂ ಸಾಧನೆ ಮಾಡಬೇಕಿದ್ದರೆ ಮಾಡಬೇಕು. ಮಿಕ್ಕಿದ್ದೆಲ್ಲವೂ ಸಮಸ್ಯೆಯಾಗಿಯೇ ಉಳಿಯುವುದಿಲ್ಲ. ಅಂದುಕೊಂಡ ಮೇಲೆ ಮಾಡದಿದ್ದರೆ ಮಾತ್ರ ಸಮಸ್ಯೆ ಅಷ್ಟೇ.
4.ನನಗೆ ಪ್ರಚಾರ ಬೇಡ, ಇವುಗಳಿಂದ ನಾನು ದೂರ ಉಳಿಯುತ್ತೇನೆ. ನನ್ನ ಬಗ್ಗೆ ಏನನ್ನೂ ಬರೆಯಬೇಡಿ, ಹೇಳ ಬೇಡಿ ಎನ್ನುವುದೂ ಒಂದು ವಿಧದ ಆಸೆ.
5.ಸುಖ ಮತ್ತು ದುಃಖದಂತೆ ಹೊಗಳಿಕೆ ಮತ್ತು ತೆಗಳಿಕೆಗಳೆರಡೂ ಬದುಕಿನಲ್ಲಿ ಯಾವಾಗ ಬೇಕಾದರೂ ಬಂದು ಹೋಗಬಹುದು. ಆದಕಾರಣ ಇವೆರಡನ್ನೂ ಮೀರಿ ಹೋಗಬೇಕು
6.ಯಾವುದೇ ಕ್ಷೇತ್ರದಲ್ಲಿ ಮನಸ್ಸು ಮಾಡಿದರೆ ಸಾಕಷ್ಟು ಹೆಸರು ಗಳಿಸಬಹುದು. ಅದನ್ನು ಮೀರಿಯೂ ಹೋಗಬಹುದು. ಆದರ ಜತೆಗೆ ವಿನಯವಂತಿಕೆ, ಔದಾರ್ಯ ಇದ್ದರೆ ಅದರ ಸೊಗಸೇ ಬೇರೆ.
7.ಮನಸ್ಸನ್ನು ಮನಸ್ಸಿಟ್ಟು ಸ್ವಚ್ಛಗೊಳಿಸಿದರೆ ನಿರ್ಮಲವಾಗಲು, ಶಾಂತವಾಗಲು ಹೆಚ್ಚು ಹೊತ್ತು ಬೇಡ..ಆಗ ಅದುವೇ ಗುರುವಾಗುತ್ತದೆ. ಕೈ ಹಿಡಿದು ಮುನ್ನಡೆಸುತ್ತದೆ.
8.ಕಲ್ಪನೆಗಳು ಎಲ್ಲಿಂದ ಎಲ್ಲಿಗೋ ಕರೆದೊಯ್ಯಬಹುದು. ಕಲ್ಪನೆಯ ಲೋಕದಲ್ಲಿ ನಮಗೆ ಬೇಕಾದಷ್ಟು ಹೊತ್ತು ಇದ್ದು ಬರಬಹುದು.
Subscribe to:
Post Comments (Atom)
No comments:
Post a Comment