Saturday, 21 April 2012
ಮನಸ್ಸನ್ನು ಮನಸ್ಸಿಟ್ಟು ಸ್ವಚ್ಛಗೊಳಿಸಿದರೆ ನಿರ್ಮಲವಾಗಲು, ಶಾಂತವಾಗಲು ಹೆಚ್ಚು ಹೊತ್ತು ಬೇಡ..ಆಗ ಅದುವೇ ಗುರುವಾಗುತ್ತದೆ. ಕೈ ಹಿಡಿದು ಮುನ್ನಡೆಸುತ್ತದೆ.
ಕಲ್ಪನೆಯ ಅನುಸಾರ ವಾಸ್ತವ ಇಲ್ಲದಿರಲು ಕಾರಣ, ವಾಸ್ತವದ ಅನುಸಾರ ಕಲ್ಪನೆ ಇಲ್ಲದಿರುವುದು
ಕಲ್ಪನೆಗಳು ಎಲ್ಲಿಂದ ಎಲ್ಲಿಗೋ ಕರೆದೊಯ್ಯಬಹುದು. ಕಲ್ಪನೆಯ ಲೋಕದಲ್ಲಿ ನಮಗೆ ಬೇಕಾದಷ್ಟು ಹೊತ್ತು ಇದ್ದು ಬರಬಹುದು.
ಮೌನವಾಗಿರುವುದರಿಂದ ದೂರ ಆಗಬಹುದು. ಆದರೆ ಮತ್ತೆ ಹತ್ತಿರವಾಗಲು ಮಾತುಗಳೇ ಬೇಕು..ಆದಕಾರಣ ಎಲ್ಲಿ ಮಾತಾಗಬೇಕು, ಎಲ್ಲಿ ಮೌನವಾಗಬೇಕು ಎಂಬುದು ತಿಳಿದಿರಬೇಕು..
ಬಂಧುಗಳು ಹಣ ಸಹಾಯ ಮಾಡಲು ಮುಂದೆ ಬಂದರೆ ಥ್ಯಾಂಕ್ಸ್ ತಿಳಿಸಿರಿ. ಆದರೆ ಶೀಘ್ರ ಅವರ ಹಣ ವಾಪಸ್ ಮಾಡಲು ಆಗದು ಎಂದಿದ್ದರೆ, ಅವರಿಂದ ಸಾಲ ಪಡೆಯದಿರುವುದೇ ಉತ್ತಮ.
ದೊಡ್ಡವರಾಗುತ್ತಿದ್ದಂತೆ ದೊಡ್ಡವರಾಗಬೇಕಾದರೆ ಸಣ್ಣ ತನಗಳನ್ನೆಲ್ಲ ಕೈಬಿಡುತ್ತಾ ಹೋಗಲೇಬೇಕು...ಅಕಸ್ಮಾತ್ ಸಣ್ಣತನಗಳನ್ನು ತ್ಯಜಿಸದಿದ್ದರೆ, ದೊಡ್ಡವರಾದರೂ ಸಣ್ಣತನದ ಮನುಷ್ಯರಂತೆ ವರ್ತನೆಗಳು ಇರುತ್ತವೆ.
Subscribe to:
Post Comments (Atom)
No comments:
Post a Comment