ಇತ್ತೀಚೆಗೆ ಊರಿಗೆ ಹೋಗಿದ್ದಾಗ ಕಂಡ ದೃಶ್ಯಗಳಿವು. ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ರೈಲು ಹತ್ತಿದ ಬಳಿಕ ಕಬಕ-ಪುತ್ತೂರು ನಿಲ್ದಾಣದಲ್ಲಿ ಇಳಿಯುವ ತನಕ ಸವಿದ ನಿಸರ್ಗದ ದೃಶ್ಯಾವಳಿಗಳಿವು. ಕೇವಲ ೯೩ ರೂ. ದರದಲ್ಲಿ ಸಿಗುವ ಪ್ರಯಾಣದ ಅನುಭವ ಮರೆಯಲಾಗದು. ಸಕಲೇಶಪುರದಿಂದ ಸುಬ್ರಮಣ್ಯ ರೋಡ್ ತನಕ ಮಾರ್ಗ ಮಧ್ಯೆ ಸಿಗುವ ಐವತ್ತಕ್ಕೂ ಹೆಚ್ಚು ಸುರಂಗಗಳು, ಘಟ್ಟದ ವೈಭವ ಅಮೋಘ. ಚಲಿಸುತ್ತಿದ್ದ ರೈಲಿನಿಂದಲೇ ಆರಾಮವಾಗಿ ಕುಳಿತುಕೊಂಡು ಸೆರೆ ಹಿಡಿದ ಚಿತ್ರಗಳಿವು.
ಸಮ್ಮನಸ್ಸಿಗೆ ಶರಣು
6 months ago
No comments:
Post a Comment