Sunday, 28 February 2010

ಕಪ್ಪುದ್ರಾಕ್ಷಿಯ ಕರುಣಾಜನಕ ಕಥೆ
ಬೆಂಗಳೂರು ಗ್ರಾಮಾಂತರದಲ್ಲಿ ಮಾತ್ರ ಬೆಳೆಯಲಾಗುತ್ತಿರುವ ಕಪ್ಪು ದ್ರಾಕ್ಷಿ ಇದೆಯಲ್ಲವೇ? ( ಬೆಂಗಳೂರು ಬ್ಲೂ ಗ್ರೇಪ್ಸ್ ) ಇದರ ಭವಿಷ್ಯವೇ ಕಪ್ಪಾಗಿದೆ. ಕಾರಣ ಮಲಯಾಳಂ ಮನೋರಮಾದ ಒಂದು ವರದಿ ಎನ್ನುತ್ತಾರೆ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದ ಪದಾಕಾರಿ ವೇಣುಗೋಪಾಲ್. ಎಂಥಾ ದುರಂತ ನೋಡಿ, ಒಂದೂ ಕಾಲು ಲಕ್ಷ ಟನ್ ದ್ರಾಕ್ಷಿಗೆ ಮಾರುಕಟ್ಟೆ ಬಿದ್ದ ಹೋಗಿದೆ. ಪ್ರತಿ ಕೆ.ಜಿಗೆ ೧೦-೧೨ ರೂ. ಇದ್ದದ್ದು, ೨ ರೂ.ಗೆ ಕುಸಿದಿದೆ. ಪ್ರತಿ ಕೆ.ಜಿ ದ್ರಾಕ್ಷಿ ಬೆಳೆಯಲು ಖರ್ಚು ೮ ರೂ. ತಗಲುತ್ತದೆ. ಹೀಗಾಗಿ ಏಳೂವರೆ ಸಾವಿರ ಕುಟುಂಬಗಳು ಸಂಕಷ್ಟದಲ್ಲಿವೆ.
ಮಲಯಾಳಂ ಮನೋರಮಾದಲ್ಲಿ ಜನವರಿಯಲ್ಲಿ ಒಂದು ವರದಿ ಪ್ರಕಟವಾಯಿತು. ಕಪ್ಪು ದ್ರಾಕ್ಷಿಯಲ್ಲಿ ಕೀಟನಾಶಕದ ಅಂಶ ಮಿತಿ ಮೀರಿದೆ ಎಂದು ಪತ್ರಿಕೆ ಬರೆಯಿತು. ಕೂಡಲೇ ಕೇರಳದಲ್ಲಿ ಕಪ್ಪು ದ್ರಾಕ್ಷಿಯ ಮಾರುಕಟ್ಟೆ ಪಾತಾಳಕ್ಕೆ ಕುಸಿಯಿತು.
ನಿಜ. ದ್ರಾಕ್ಷಿಯಲ್ಲಿ ಕೀಟನಾಶಕದ ಅಂಶ ಇದೆ. ಆದರೆ ಕಪ್ಪು ದ್ರಾಕ್ಷಿಯೊಂದೇ ಅಲ್ಲ, ಇತರ ಎಲ್ಲ ದ್ರಾಕ್ಷಿಯಲ್ಲೂ, ತರಕಾರಿಗಳಲ್ಲಿ ಕೂಡ ಸ್ವಲ್ಪ ಪ್ರಮಾಣದ ಕೀಟನಾಶಕ ಇದ್ದೇ ಇದೆ. ದ್ರಾಕ್ಷಿ ಹಣ್ಣುಗಳನ್ನಂತೂ ಕೀಟನಾಶಕಗಳಲ್ಲಿ ಅದ್ದಿ ತೆಗೆಯುವುದು ಸಾಮಾನ್ಯ. ಆದರೆ ಮಾರುಕಟ್ಟೆಗೆ ಬಂದಿಳಿಯುವ ದ್ರಾಕ್ಷಿಗಳಲ್ಲಿ ಎಷ್ಟು ಕ್ರಿಮಿನಾಶಕ ಇದೆ ಅಂತ ಗ್ರಾಹಕರು ಕಂಡುಹಿಡಿಯುವುದು ಹೇಗೆ ? ಅದಕ್ಕೊಂದು ಸುಲಭ ಪರೀಕ್ಷೆಯ ಸಾಧನ ಗ್ರಾಹಕರಿಗೆ ಸಿಗುವಂತಾಗಬಾರದೇಕೆ ? ಕೃಷಿ ವಿಜ್ಞಾನಿಗಳು ಈ ಬಗ್ಗೆ ಯಾಕೆ ಗಮನ ಹರಿಸುವುದಿಲ್ಲ ?

Thursday, 25 February 2010

ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸಮಾಧಿ ಸ್ಥಳಸಾಹಸ ಸಿಂಹ ವಿಷ್ಣುವರ್ಧನ್ ಅವರ ಸಮಾಧಿ ಸ್ಥಳ ಕೆಂಗೇರಿ ಸಮೀಪದ ಅಭಿಮಾನ್ ಸ್ಟೂಡಿಯೊದ ಆವರಣದಲ್ಲಿದೆ. ಹಿರಿಯ ನಟ ಬಾಲಣ್ಣನವರ ಸಮಾಧಿಯೂ ಅಲ್ಲಿದೆ. ಪ್ರತಿ ದಿನ ನೂರಾರು ಮಂದಿ ಅಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಅಂತಹ ಸಮಾಧಿ ಸ್ಥಳವನ್ನು ಆದಷ್ಟು ಬೇಗ ಅಭಿವೃದ್ಧಿಪಡಿಸಬೇಕು.
ಈವತ್ತು ವಿಷ್ಣುವರ್ಧನ್ ಸಮಾಧಿಗೆ ಭೇಟಿ ನೀಡಿದಾಗ ಒಂದು ಘಟನೆ ನಡೆಯಿತು. ಸಮಾಧಿಯ ಪಕ್ಕ ಛಾಯಾಚಿತ್ರಗಾರನೊಬ್ಬ ಕೂತಿದ್ದ. ಆತನ ಚೀಲವೂ ಅಲ್ಲಿತ್ತು. ನಾನು ನನ್ನಪಾಡಿಗೆ ಫೊಟೊ ಕ್ಲಿಕ್ಕಿಸಿದ ತಕ್ಷಣ " ಫೊಟೊ ತೆಗೆಯಬಾರದು. ಬೇಕಾದರೆ ನಾನೇ ತೆಗೆದುಕೊಡುತ್ತೇನೆ ಎಂದ..! " ಏನಿದು ? ಅಭಿಮಾನಿಗಳು ವಿಷ್ಣುವರ್ಧನ್ ಅವರ ಸಮಾಧಿಯ ಭಾವಚಿತ್ರವನ್ನೂ ಸೆರೆಹಿಡಿಯುವಂತಿಲ್ಲವೇ ? ಆತ ಬಹುಶಃ ತಾನೇ ಚಿತ್ರ ತೆಗೆದುಕೊಟ್ಟು ದುಡ್ಡು ಮಾಡುತ್ತಿದ್ದನೇ ? ನಾನು ವಿಚಾರಿಸಲು ಹೋಗಲಿಲ್ಲ. ಆದರೆ ಒಂದು ವೇಳೆ ಹಾಗೆ ಮಾಡುತ್ತಿದ್ದರೆ ಅದು ಶುದ್ಧ ತಪ್ಪು...

Tuesday, 23 February 2010

ಶಿರ್ಕೆಯ ಕೆ.ಎಚ್.ಬಿ ಅಪಾರ್ಟ್‌ಮೆಂಟ್‌ನ ಮಧ್ಯಮ ವರ್ಗದ ಜೀವನಶೈಲಿ-ಭಾಗ-೨
ಈ ಸಲ ನೀರಿನ ಟ್ಯಾಂಕಿಯ ಕಟ್ಟೆಯಲ್ಲಿ ಕುಳಿತು ಎತ್ತಲೋ ನೋಡುತ್ತಿರುವ ಬೆಕ್ಕು, ಬಾಲ್ಕನಿಯಲ್ಲಿ ವಿಶ್ರಮಿಸುತ್ತಿರುವ ಹಿರಿಯರು, ವ್ಯಾಪಾರಿ ಮಹಿಳೆ, ಲಿಂಬೆಕಾಯಿಯನ್ನು ಗೋಣಿಚೀಲದಲ್ಲಿ ತುಂಬಿ ಮಾರಾಟ ಮಾಡುತ್ತಿರುವ ವ್ಯಾಪಾರಿ, ಕಾರು ತೊಳೆಯುತ್ತಿರುವಾತ, ಬೀದಿ ಬದಿ ಸಂಕೋಲೆಯಲ್ಲಿ ಕಟ್ಟಿರುವ ನಾಯಿಯನ್ನು ಕಾಣಬಹುದು

ಕೇಂದ್ರ ಬಜೆಟ್ ಅನುಮೋದನೆ ಹೇಗೆ ?


ಬಜೆಟ್ ಮಾಲಿಕೆಯ ೧೧ನೇ ಕಂತು ಇಲ್ಲಿದೆ. ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ

Monday, 22 February 2010

ಬಜೆಟ್ ಮಾಲಿಕೆಯ ೧೦ನೇ ಕಂತು : ಪ್ಯಾಕೇಜ್ ವಾಪಸ್ ಮತ್ತು ಉದ್ಯಮಿಗಳ ರಂಪಬಜೆಟ್ ಮಾಲಿಕೆಯ ೧೦ನೇ ಕಂತು ಇಲ್ಲಿದೆ. ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ

Sunday, 21 February 2010

ಸಂಸದರು ಲಾಬಿ ಮಾಡಲ್ಲ : ಸಿದ್ದು


ಬಜೆಟ್ ಮಾಲಿಕೆಯ ೯ನೇ ಕಂತು ಇಲ್ಲಿದೆ. ವಿಧಾನಸಭೆಯ ಪ್ರತಿ ಪಕ್ಷ ನಾಯಕ ಸಿದ್ದ ರಾಮಯ್ಯ ಅವರನ್ನು ಸಂದರ್ಶಿಸಿದ ವರದಿಯಿದು. ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ

Saturday, 20 February 2010

ಮಧ್ಯಮ ವರ್ಗದ ಜನರ ಅಪಾರ್ಟ್‌ಮೆಂಟ್ ಜೀವನ ಶೈಲಿ
ಬೆಂಗಳೂರಿನ ಕೆಂಗೇರಿಗೆ ಸಮೀಪದ ಶಿರ್ಕೆ ಅಪಾರ್ಟ್‌ಮೆಂಟ್‌ಗಳ ಚಿತ್ರಣ ಇಲ್ಲಿದೆ. ಮಧ್ಯಮ ವರ್ಗದವರೇ ಹೆಚ್ಚಾಗಿರುವ ವಸತಿ ಸಂಕೀರ್ಣವಿದು. ಕರ್ನಾಟಕ ಗೃಹ ಮಂಡಳಿಯುವರು ಕಟ್ಟಿದ ಅಪಾರ್ಟ್‌ಮೆಂಟ್‌ಗಳಿವು. ಮಧ್ಯಮ ವರ್ಗದ ಜನರ ಅಪಾರ್ಟ್‌ಮೆಂಟ್ ಜೀವನ ಶೈಲಿಯನ್ನು ಇಲ್ಲಿ ಹೇರಳವಾಗಿ ಕಾಣಬಹುದು. ನೋಡಿ..ಪ್ರತಿಕ್ರಿಯಿಸಿದರೆ ಖುಷಿ..

Friday, 19 February 2010

ಇನ್‌ಕಮ್ ಟ್ಯಾಕ್ಸ್ ಇಷ್ಟೊಂದಾ...!


ಬಜೆಟ್ ಮಾಲಿಕೆಯ ೮ನೇ ಕಂತು ಇಲ್ಲಿದೆ. ಲೇಖನದ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ

Thursday, 18 February 2010

ಬಜೆಟ್ ಅಂದರೆ ಸಚಿವರ ಮಟ್ಟದ ನಾನ್‌ಸೆನ್ಸ್ !


ಬಜೆಟ್ ೨೦೧೦ ಮಾಲಿಕೆಯ ೭ನೇ ಕಂತು ಇಲ್ಲಿದೆ. ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತದೆ

ಗ್ರಾಮೀಣ ಆರೋಗ್ಯ ಖಾತರಿ ಬೇಕೆಂದ ವೈದ್ಯ !


ಬಜೆಟ್ ಮಾಲಿಕೆಯ ೬ನೇ ಕಂತು. ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ

Tuesday, 16 February 2010

ಫೆಬ್ರವರಿಯಲ್ಲೇ ಏಕೆ ಬಜೆಟ್ ಮಂಡಿಸುತ್ತಾರೆ ?


ಬಜೆಟ್ ಮಾಲಿಕೆಯ ಐದನೇ ಕಂತು ಇಲ್ಲಿದೆ. ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸಿಕೊಳ್ಳುತ್ತೆ

ತೆರಿಗೆ ವಿನಾಯಿತಿ ೨.೫೦ ಲಕ್ಷಕ್ಕೆ ಏರಿಸುತ್ತಾರಾ ? ಕಷ್ಟ..!
ಬಜೆಟ್ ಮಾಲಿಕೆಯ ನಾಲ್ಕನೇ ಕಂತು. ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸಿಕೊಳ್ಳುತ್ತೆ

ಬಜೆಟ್‌ನ ಗೌಪ್ಯತೆಯ ಸುತ್ತಮುತ್ತ


ಬಜೆಟ್ ಮಾಲಿಕೆಯ ೩ನೇ ಕಂತು. ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸಿಕೊಳ್ಳುತ್ತೆ

Sunday, 14 February 2010

ಬಜೆಟ್ ೨೦೧೦ ಮಾಲಿಕೆಯ ಎರಡನೇ ಕಂತುಬಜೆಟ್ ೨೦೧೦ ಮಾಲಿಕೆಯ ಎರಡನೇ ಕಂತು. ಚಿತ್ರ ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸಿಕೊಳ್ಳುತ್ತದೆ

Thursday, 11 February 2010

ಬಜೆಟ್ ೨೦೧೦ : ವೇತನ ವರ್ಗದವರಿಗೆ ಏನಿರಬಹುದು ?


ಕೇಂದ್ರ ಬಜೆಟ್ ಮಂಡನೆ ಫೆ.೨೬ರಂದು ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ವಿಜಯ ಕರ್ನಾಟಕ ವಾಣಿಜ್ಯ ಪುಟದಲ್ಲಿ ಬಜೆಟ್ ಮುನ್ನೋಟ ಹಾಗೂ ಇತರ ಸ್ವಾರಸ್ಯಗಳ ಬಗ್ಗೆ ಮಾಲಿಕೆ ಬರೆಯುತ್ತಿದ್ದೇನೆ. ಚಿತ್ರ ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸಿಕೊಳ್ಳುತ್ತದೆ.

Monday, 8 February 2010

ನೈಸರ್ಗಿಕ ಸಂಪತ್ತನ್ನು ಉಳಿಸುವ ಜವಾಬ್ದಾರಿ


ರಾಜ್ಯದ ಖನಿಜ ಸಂಪನ್ಮೂಲದ ಬಗ್ಗೆ ವಿಜಯ ಕರ್ನಾಟಕಕ್ಕೆ ಬರೆದ ವರದಿ ಇಲ್ಲಿದೆ. ಚಿತ್ರ ವರದಿಯನ್ನು ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸಿಕೊಳ್ಳುತ್ತದೆ. ರೆಡ್ಡಿ ಬ್ರದರ್ಸ್ ಆದಿಯಾಗಿ ಖದೀಮರು ಈ ಖನಿಜಸಂಪತ್ತನ್ನು ಲೂಟಿ ಮಾಡದಂತೆ ತಡೆಯುವ ಹೊಣೆ, ಮುಂದಿನ ಪೀಳಿಗೆಗೆ ನೈಸರ್ಗಿಕ ಸಂಪತ್ತನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಲ್ಲದಿದ್ದಲ್ಲಿ ಮುಂದಿನ ತಲೆಮಾರು ನಮ್ಮನ್ನು ಕ್ಷಮಿಸದು.

Thursday, 4 February 2010

ಚಿತ್ರಗಳು ಅನೇಕ ಸಂಗತಿಗಳನ್ನು ಕಾಣಿಸುತ್ತದೆಯಲ್ಲವೇ..
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ವಿಜಯ ಕರ್ನಾಟಕದ ಕಚೇರಿ ಇದೆ. ಅಲ್ಲಿಯೇ ಉದ್ಯೋಗವಾದ್ದರಿಂದ ಸುತ್ತುಮುತ್ತಲಿನ ಪರಿಸರ ಪರಿಚಿತ. ಪತ್ರಿಕೆಗೆ ಸೇರ್ಪಡೆಯಾದ ಕೆಲವೇ ದಿನಗಳಲ್ಲಿ ಈ ಪರಿಸರ ಮನಸ್ಸಿಗೆ ಮುದ ನೀಡಿತ್ತು. ಇಲ್ಲಿ ಅಪ್ಯಾಯಮಾನವಾಗುವ, ಮನಸ್ಸಿಗೆ ಶಾಂತಿ, ನೆಮ್ಮದಿಯನ್ನು ನೀಡುವ ಅನೇಕ ಅಂಶಗಳಿವೆ. ವಿಜಯ ಕರ್ನಾಟಕ ಕಚೇರಿಗೆ ಹೊಂದಿಕೊಂಡಂತೆ ಹಳೆಯ ಸಂಸ್ಕೃತ ಕಾಲೇಜಿದೆ. ಕನ್ನಡ ಸಾಹಿತ್ಯ ಪರಿಷತ್ತಿದೆ. ಕೂಗಳತೆಯ ದೂರದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ೮ರಿಂದ ೧೦ರ ತನಕ ಓದಿದ್ದ ಮಾಡೆಲ್ ಪ್ರೌಢ ಶಾಲೆಯಿದೆ. ಅದರ ಸನಿಹದಲ್ಲೇ ಹಳೆಯ ದೇವಾಲಯವಿದೆ. ದೇವಾಲಯದ ಆವರಣ ತುಂಬ ಗಿಡ ಮರಗಳಿವೆ. ಅಲ್ಲಿನ ತಂಗಾಳಿಗೆ ಮೈಯೊಡ್ಡಿ ಕಲ್ಲು ಬೆಂಚಿನ ಮೇಲೆ ಕುಳಿತುಕೊಂಡರೆ ಆಯಾಸವೆಲ್ಲ ಕರಗುತ್ತದೆ. ಬರೆಯುವುದಕ್ಕಿಂತಲೂ ಚಿತ್ರಗಳು ಅನೇಕ ಸಂಗತಿಗಳನ್ನು ಕಾಣಿಸುತ್ತದೆಯಲ್ಲವೇ.. ಇಲ್ಲಿದೆ ನೋಡಿ..

Tuesday, 2 February 2010


ಟೈಟಾನ್ ವಾಚ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಭಾಸ್ಕರ್ ಭಟ್ ಮೂಡಬಿದಿರೆಯ ಪುತ್ತಿಗೆ ಮೂಲದವರು. ಈ ಕನ್ನಡಿಗ ಟೈಟಾನ್ ಕಂಪನಿಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರವ ವಹಿಸಿದವರು. ಅವರ ಬಗ್ಗೆ ವಿಜಯ ಕರ್ನಾಟಕ ವಾಣಿಜ್ಯ ವಿಭಾಗಕ್ಕೆ ಬರೆದ ಸಂದರ್ಶನ ವರದಿ ಇಲ್ಲಿದೆ.


( ಚಿತ್ರ ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ )