






ಬೆಂಗಳೂರಿನ ಚಾಮರಾಜಪೇಟೆಯಲ್ಲಿ ವಿಜಯ ಕರ್ನಾಟಕದ ಕಚೇರಿ ಇದೆ. ಅಲ್ಲಿಯೇ ಉದ್ಯೋಗವಾದ್ದರಿಂದ ಸುತ್ತುಮುತ್ತಲಿನ ಪರಿಸರ ಪರಿಚಿತ. ಪತ್ರಿಕೆಗೆ ಸೇರ್ಪಡೆಯಾದ ಕೆಲವೇ ದಿನಗಳಲ್ಲಿ ಈ ಪರಿಸರ ಮನಸ್ಸಿಗೆ ಮುದ ನೀಡಿತ್ತು. ಇಲ್ಲಿ ಅಪ್ಯಾಯಮಾನವಾಗುವ, ಮನಸ್ಸಿಗೆ ಶಾಂತಿ, ನೆಮ್ಮದಿಯನ್ನು ನೀಡುವ ಅನೇಕ ಅಂಶಗಳಿವೆ. ವಿಜಯ ಕರ್ನಾಟಕ ಕಚೇರಿಗೆ ಹೊಂದಿಕೊಂಡಂತೆ ಹಳೆಯ ಸಂಸ್ಕೃತ ಕಾಲೇಜಿದೆ. ಕನ್ನಡ ಸಾಹಿತ್ಯ ಪರಿಷತ್ತಿದೆ. ಕೂಗಳತೆಯ ದೂರದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ೮ರಿಂದ ೧೦ರ ತನಕ ಓದಿದ್ದ ಮಾಡೆಲ್ ಪ್ರೌಢ ಶಾಲೆಯಿದೆ. ಅದರ ಸನಿಹದಲ್ಲೇ ಹಳೆಯ ದೇವಾಲಯವಿದೆ. ದೇವಾಲಯದ ಆವರಣ ತುಂಬ ಗಿಡ ಮರಗಳಿವೆ. ಅಲ್ಲಿನ ತಂಗಾಳಿಗೆ ಮೈಯೊಡ್ಡಿ ಕಲ್ಲು ಬೆಂಚಿನ ಮೇಲೆ ಕುಳಿತುಕೊಂಡರೆ ಆಯಾಸವೆಲ್ಲ ಕರಗುತ್ತದೆ. ಬರೆಯುವುದಕ್ಕಿಂತಲೂ ಚಿತ್ರಗಳು ಅನೇಕ ಸಂಗತಿಗಳನ್ನು ಕಾಣಿಸುತ್ತದೆಯಲ್ಲವೇ.. ಇಲ್ಲಿದೆ ನೋಡಿ..
No comments:
Post a Comment