Sunday 28 February 2010

ಕಪ್ಪುದ್ರಾಕ್ಷಿಯ ಕರುಣಾಜನಕ ಕಥೆ




ಬೆಂಗಳೂರು ಗ್ರಾಮಾಂತರದಲ್ಲಿ ಮಾತ್ರ ಬೆಳೆಯಲಾಗುತ್ತಿರುವ ಕಪ್ಪು ದ್ರಾಕ್ಷಿ ಇದೆಯಲ್ಲವೇ? ( ಬೆಂಗಳೂರು ಬ್ಲೂ ಗ್ರೇಪ್ಸ್ ) ಇದರ ಭವಿಷ್ಯವೇ ಕಪ್ಪಾಗಿದೆ. ಕಾರಣ ಮಲಯಾಳಂ ಮನೋರಮಾದ ಒಂದು ವರದಿ ಎನ್ನುತ್ತಾರೆ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದ ಪದಾಕಾರಿ ವೇಣುಗೋಪಾಲ್. ಎಂಥಾ ದುರಂತ ನೋಡಿ, ಒಂದೂ ಕಾಲು ಲಕ್ಷ ಟನ್ ದ್ರಾಕ್ಷಿಗೆ ಮಾರುಕಟ್ಟೆ ಬಿದ್ದ ಹೋಗಿದೆ. ಪ್ರತಿ ಕೆ.ಜಿಗೆ ೧೦-೧೨ ರೂ. ಇದ್ದದ್ದು, ೨ ರೂ.ಗೆ ಕುಸಿದಿದೆ. ಪ್ರತಿ ಕೆ.ಜಿ ದ್ರಾಕ್ಷಿ ಬೆಳೆಯಲು ಖರ್ಚು ೮ ರೂ. ತಗಲುತ್ತದೆ. ಹೀಗಾಗಿ ಏಳೂವರೆ ಸಾವಿರ ಕುಟುಂಬಗಳು ಸಂಕಷ್ಟದಲ್ಲಿವೆ.
ಮಲಯಾಳಂ ಮನೋರಮಾದಲ್ಲಿ ಜನವರಿಯಲ್ಲಿ ಒಂದು ವರದಿ ಪ್ರಕಟವಾಯಿತು. ಕಪ್ಪು ದ್ರಾಕ್ಷಿಯಲ್ಲಿ ಕೀಟನಾಶಕದ ಅಂಶ ಮಿತಿ ಮೀರಿದೆ ಎಂದು ಪತ್ರಿಕೆ ಬರೆಯಿತು. ಕೂಡಲೇ ಕೇರಳದಲ್ಲಿ ಕಪ್ಪು ದ್ರಾಕ್ಷಿಯ ಮಾರುಕಟ್ಟೆ ಪಾತಾಳಕ್ಕೆ ಕುಸಿಯಿತು.
ನಿಜ. ದ್ರಾಕ್ಷಿಯಲ್ಲಿ ಕೀಟನಾಶಕದ ಅಂಶ ಇದೆ. ಆದರೆ ಕಪ್ಪು ದ್ರಾಕ್ಷಿಯೊಂದೇ ಅಲ್ಲ, ಇತರ ಎಲ್ಲ ದ್ರಾಕ್ಷಿಯಲ್ಲೂ, ತರಕಾರಿಗಳಲ್ಲಿ ಕೂಡ ಸ್ವಲ್ಪ ಪ್ರಮಾಣದ ಕೀಟನಾಶಕ ಇದ್ದೇ ಇದೆ. ದ್ರಾಕ್ಷಿ ಹಣ್ಣುಗಳನ್ನಂತೂ ಕೀಟನಾಶಕಗಳಲ್ಲಿ ಅದ್ದಿ ತೆಗೆಯುವುದು ಸಾಮಾನ್ಯ. ಆದರೆ ಮಾರುಕಟ್ಟೆಗೆ ಬಂದಿಳಿಯುವ ದ್ರಾಕ್ಷಿಗಳಲ್ಲಿ ಎಷ್ಟು ಕ್ರಿಮಿನಾಶಕ ಇದೆ ಅಂತ ಗ್ರಾಹಕರು ಕಂಡುಹಿಡಿಯುವುದು ಹೇಗೆ ? ಅದಕ್ಕೊಂದು ಸುಲಭ ಪರೀಕ್ಷೆಯ ಸಾಧನ ಗ್ರಾಹಕರಿಗೆ ಸಿಗುವಂತಾಗಬಾರದೇಕೆ ? ಕೃಷಿ ವಿಜ್ಞಾನಿಗಳು ಈ ಬಗ್ಗೆ ಯಾಕೆ ಗಮನ ಹರಿಸುವುದಿಲ್ಲ ?

No comments:

Post a Comment