Friday, 31 December 2010

ಚಿನ್ನಕ್ಕಿಂತ ಹೆಚ್ಚು ಸುದ್ದಿ ಮಾಡಿದ ಬೆಳ್ಳಿ


ಬೆಳ್ಳಿ ಈ ವರ್ಷ ಚಿನ್ನಕ್ಕಿಂತ ಹೆಚ್ಚು ಸುದ್ದಿ ಮಾಡಿದ ಲೋಹ. ಈ ಕುರಿತ ಪಿಟಿಐ ಆಧಾರಿತ ವರದಿ. ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತದೆ.

Tuesday, 28 December 2010

ಇನ್ಫೋಸಿಸ್ ಸಹ ಸಂಸ್ಥಾಪಕ ಕೆ.ದಿನೇಶ್ ಯಶೋಗಾಥೆ


ಇನ್ಫೋಸಿಸ್ ಸಹ ಸಂಸ್ಥಾಪಕ ಕೆ.ದಿನೇಶ್ ಯಶೋಗಾಥೆ ಕುರಿತ ವರದಿ. ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ.

Monday, 6 December 2010ಹೀರೊ ಹೋಂಡಾದ ೨೬ ವರ್ಷಗಳ ಒಪ್ಪಂದ ಮುರಿದು ಬೀಳುವ ಎಲ್ಲ ಸಾಧ್ಯತೆಗಳಿದೆ. ಈ ಕುರಿತ ವರದಿ. ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ

Sunday, 21 November 2010ದೇಶದ ಎರಡನೇ ಅತಿ ದೊಡ್ಡ ಸಾಫ್ಟ್‌ವೇರ್ ಕಂಪನಿ ಇನ್ಫೋಸಿಸ್ ಸ್ಥಾಪಿಸಿರುವ, ೫೦ ಲಕ್ಷ ರೂ. ನಗದು ಬಹುಮಾನವನ್ನು ಒಳಗೊಂಡಿರುವ ಇನ್ಫೋಸಿಸ್ ಪ್ರಶಸ್ತಿಯ ಹಿಂದಿನ ಕಥೆ. ವಿಜಯ ಕರ್ನಾಟಕಕ್ಕೆ ಬರೆದ ಈ ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತದೆ

Wednesday, 15 September 2010

ಕಳ್ಳೆ ಪುರಿಯಂತೆ ಸಿಮ್ ಮಾರಾಟ ಮಾಡಿದ ಮೇಲೆ ದಾಖಲೆಗಳ ತಪಾಸಣೆ ನಡೆಸಿದ್ರು !ರಾಜ್ಯದಲ್ಲಿ ಏರ್‌ಟೆಲ್‌ನ ಲಕ್ಷಾಂತರ ಗ್ರಾಹಕರ ಮೊಬೈಲ್ ಸಂಪರ್ಕವನ್ನು ಏಕಾಏಕಿ ಕಡಿತಗೊಳಿಸಲಾಗಿದೆಯೇ ? ಮೈಸೂರಿನಲ್ಲಿ ಮೊಬೈಲ್ ಮಳಿಗೆಗಳ ಮೇಲೆ ದಾಳಿ ನಡೆಸಿದ ಪೊಲೀಸರು ತೀವ್ರ ತಪಾಸಣೆ ನಡೆಸಿದರಂತೆ. ಒಬ್ಬರ ಹೆಸರಿನಲ್ಲಿ ಲೆಕ್ಕಕ್ಕಿಂತ ಹೆಚ್ಚು ಸಿಮ್‌ಗಳನ್ನು ನೀಡಲಾಗಿದೆಯೇ ಎಂಬುದನ್ನು ಶೋಸಿದರಂತೆ. ಕೆಲ ದಿನಗಳಿಂದೀಚೆಗೆ ಹಬ್ಬುತ್ತಿರುವ ನಾನಾ ವದಂತಿಗಳಿವು. ಬೆಂಗಳೂರಿನ ವೈದ್ಯರೊಬ್ಬರು ಸರಿಯಾದ ದಾಖಲೆಗಳನ್ನು ಕೊಟ್ಟರೂ ಮೊಬೈಲ್ ಸಂಪರ್ಕ ದಿಢೀರನೆ ಕಟ್ ಆಗಿದೆಯಂತೆ.. ಈ ಮಧ್ಯೆ ಅನಗತ್ಯವಾಗಿ ಯಾರೊಬ್ಬರ ಸಂಪರ್ಕವನ್ನೂ ನಾವು ಕಡಿತಗೊಳಿಸಿಲ್ಲ ಎನ್ನುತ್ತಾರೆ ಏರ್‌ಟೆಲ್‌ನ ವಕ್ತಾರರು. ಹಾಗಾದರೆ ಏನಾಗಿದೆ ?
ನಡೆದಿರುವುದಿಷ್ಟು.
ದೂರಸಂಪರ್ಕ ಇಲಾಖೆ ಎಲ್ಲ ಟೆಲಿಕಾಂ ಕಂಪನಿಗಳಿಗೆ ಇತ್ತೀಚೆಗೆ ಚಂದಾದಾರರ ವಿಳಾಸ ಮತ್ತು ಇತರ ವಿವರಗಳನ್ನು ಮತ್ತೆ ದೃಢೀಕರಣಗೊಳಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದೆ. ಇದಕ್ಕೆ ಅಕ್ಟೋಬರ್ ೩೧ರ ಗಡುವನ್ನೂ ನೀಡಿದೆ. ದಾಖಲೆಗಳು ಸರಿ ಇಲ್ಲದಿದ್ದರೆ ಅಂತಹ ಚಂದಾದಾರರ ಮೊಬೈಲ್ ಸಂಪರ್ಕ ಕಡಿತಗೊಳ್ಳಲಿದು ಖಚಿತ. ಹೀಗಾಗಿ ಏರ್‌ಟೆಲ್ ತನ್ನ ಲಕ್ಷಾಂತರ ಗ್ರಾಹಕರಿಗೆ ಅನುಕೂಲ ಮಾಡಿಕೊಡಲು ಅಂಚೆ ಇಲಾಖೆಯ ಜತೆ ಒಪ್ಪಂದ ಮಾಡಿಕೊಂಡಿದೆ. ಏರ್‌ಟೆಲ್ ಬಳಕೆದಾರರು ರಾಜ್ಯದ ೫೯ ಪ್ರಧಾನ ಅಂಚೆ ಕಚೇರಿ ಹಾಗೂ ೨ ಸಾವಿರ ಅಂಚೆ ಕಚೇರಿಗಳಲ್ಲಿ ವಿಳಾಸ ಹಾಗೂ ಛಾಯಾಚಿತ್ರಗಳನ್ನು ದೃಢಪಡಿಸಿಕೊಳ್ಳಬಹುದು. ಈ ಕಸರತ್ತು ಏರ್‌ಟೆಲ್‌ಗೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ಟೆಲಿಕಾಂ ಕಂಪನಿಗಳೂ ದೂರಸಂಪರ್ಕ ಇಲಾಖೆಯ ಆದೇಶದಂತೆ ನಡೆದುಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮೊಬೈಲ್ ಕಂಪನಿಗಳು ಈಗಾಗಲೇ ತಮ್ಮ ಗ್ರಾಹಕರಿಗೆ ಎಸ್ಸೆಮ್ಮೆಸ್ ಮೂಲಕ ಸಂದೇಶ ರವಾನಿಸುತ್ತವೆ. ಸಂದೇಶ ಪಡೆದ ಗ್ರಾಹಕರು ದಾಖಲೆಗಳ ಮರು ದೃಢೀಕರಣ ಮಾಡಿಕೊಳ್ಳಬೇಕು. ಒಂದು ವೇಳೆ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮೊಬೈಲ್ ಕೊಡಿಸಿದ್ದಲ್ಲಿ, ಅವುಗಳೂ ವಿವರ ಒದಗಿಸಬೇಕು.
ಹಾಗಾದರೆ ಮೊಬೈಲ್ ಸಂಪರ್ಕ ಪಡೆಯುವ ವೇಳೆ ಇಲ್ಲದಿದ್ದ ಕಟ್ಟುನಿಟ್ಟು ಈಗೇಕೆ ? ಈ ಟೆಲಿಕಾಂ ಕಂಪನಿಗಳು ನಿಮಗೆ ಗೊತ್ತಾಗದಂತೆ ಮನೆ ವಿಳಾಸ ತಪಾಸಣೆ ಮಾಡುತ್ತಿದ್ದಾರೆಯೇ ?
ರಾಷ್ಟ್ರೀಯ ಭದ್ರತಾ ಹಿತಾಸಕ್ತಿಯ ದೃಷ್ಟಿಯಿಂದ ದೂರಸಂಪರ್ಕ ಇಲಾಖೆ ಕಟ್ಟುನಿಟ್ಟಾಗಿ ಈ ಕ್ರಮ ಜರುಗಿಸಲು ಮುಂದಾಗಿದೆ. ಭಯೋತ್ಪಾದಕರು, ದುಷ್ಕರ್ಮಿಗಳು ಈವತ್ತು ವ್ಯಾಪಕವಾಗಿ ಮೊಬೈಲ್‌ಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಟೆಲಿಕಾಂ ಕಂಪನಿಗಳ ಡೀಲರ್, ವಿತರಕರು ವ್ಯಾಪಾರ ಆದ್ರೆ ಸಾಕಪ್ಪಾ ಅಂತ ಮೊಬೈಲ್ ಸಂಪರ್ಕ ಕೊಟ್ಟು ಬಿಟ್ಟಿದ್ದಾರೆ. ಅವರು ಕಳ್ಳೆ ಪುರಿ ಹಂಚಿದ ಹಾಗೆ ಸಿಮ್ ವಿತರಿಸಿದ್ದರ ಹಿಂದಿನ ಅಸಲಿ ಸಂಗತಿ ಏನೆಂದರೆ ಮೊಬೈಲ್ ಕಂಪನಿಗಳ ಒತ್ತಡ ತಂತ್ರ. ಪ್ರತಿ ತಿಂಗಳು ನೀವಿಷ್ಟು ಮಾರಾಟದ ಗುರಿ ಸಾಸಲೇಬೇಕು ಎಂದು ಕಂಪನಿಗಳು ಒತ್ತಡ ಹೇರುವುದು ಸಾಮಾನ್ಯ. ಪರಿಣಾಮವಾಗಿ ದಾಖಲೆಗಳಲ್ಲಿ ಕುಲ, ಗೋತ್ರ, ವಿಳಾಸಗಳಲ್ಲಿ ವ್ಯತ್ಯಾಸಗಳು, ಲೋಪ ದೋಷಗಳು ನುಸುಳಿವೆ. ಯಾರದ್ದೋ ಹೆಸರಿನಲ್ಲಿ ಯಾರ್‍ಯಾರೋ ಮೊಬೈಲ್ ಸಂಪರ್ಕ ಪಡೆದಿದ್ದಾರೆ. ಅಂದಹಾಗೆ ಕೇವಲ ಭಯೋತ್ಪಾದಕರು ಮಾತ್ರವಲ್ಲ, ಕೊಲೆ, ಸುಲಿಗೆ, ದರೋಡೆಗಳಲ್ಲಿ ನಿರತರಾಗಿರುವ ಪಾತಕಿಗಳು ಕೂಡ ಮೊಬೈಲ್ ತಂತ್ರಜ್ಞಾನ ಮತ್ತು ವ್ಯವಸ್ಥೆಯ ದುರ್ಬಳಕೆ ಮಾಡಿಕೊಳ್ಳುವುದರಲ್ಲಿ ನಿಸ್ಸೀಮರಾಗುತ್ತಿದ್ದಾರೆ. ನೋಡಿ, ಹಂತಕನೊಬ್ಬ ಮೊಬೈಲ್ ಮಳಿಗೆಗೆ ತೆರಳಿ ಯಾವುದೇ ದಾಖಲೆ ಕೊಡದೆ ಸಿಮ್ ಖರೀದಿಸಬಹುದು. ಹೇಗೂ ದಾಖಲೆ ಒದಗಿಸಲು ೭ ದಿನಗಳ ಕಾಲಾವಕಾಶ ಇರುತ್ತದೆ. ಪಾತಕಿಗೆ ಏಳು ದಿವಸ ಯಾಕೆ ? ಅಷ್ಟರಲ್ಲಿ ಮಾಡಬಾರದ್ದನ್ನೆಲ್ಲ ಮಾಡಿ ಸಿಮ್ ಬಿಸಾಕಿ, ಹೊಸ ಸಿಮ್ ಖರೀದಿಸುತ್ತಾನೆ. ಬಳಿಕ ಮತ್ತೊಂದು. ಯಾರಿಗೆ ಬೇಕು ದಾಖಲೆಗಳ ಉಸಾಬರಿ ? ಹೀಗಿರುವಾಗ ಕೊಲೆಗಾರನನ್ನು ಪೊಲೀಸರು ಹೇಗೆ ಪತ್ತೆ ಹಚ್ಚಿಯಾರು ?
ನಮ್ಮಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸುವುದು, ಪ್ರಾಮಾಣಿಕತೆಯನ್ನು ತೋರದಿರುವುದು, ಶಿಸ್ತು ಪಾಲಿಸದಿರುವುದೇ ಹೆಮ್ಮೆಯ ಸಂಗತಿ ಎನಿಸಿದೆ. ಈವತ್ತು ಪ್ರೀ ಪೇಯ್ಡ್ ಸಿಮ್ ಅನ್ನು ಬೇರೆಯವರಿಗೆ ಯಾವುದೇ ಕಾರಣಕ್ಕೂ ವರ್ಗಾಯಿಸಲು ಸಾಧ್ಯವಾಗುವುದಿಲ್ಲ ಎಂಬ ವಿಷಯ ಎಷ್ಟು ಮಂದಿಗೆ ಗೊತ್ತಿದೆ ? ದೂರಸಂಪರ್ಕ ಇಲಾಖೆಯ ನಿಯಮಗಳ ಪ್ರಕಾರ ಪೋಸ್ಟ್ ಪೇಯ್ಡ್ ದೂರವಾಣಿ ಸಂಪರ್ಕಗಳನ್ನು ಮಾತ್ರ ರಕ್ತ ಸಂಬಂಕರಿಗೆ ವರ್ಗಾಯಿಸಬಹುದು. ಆದರೆ ಪ್ರೀ ಪೇಯ್ಡ್‌ಗಳನ್ನಲ್ಲ. ಆದರೆ ಈ ನಿಯಮಗಳನ್ನೆಲ್ಲ ಯಾವತ್ತಿಗೊ ಗಾಳಿಗೆ ತೂರಲಾಗಿದೆ. ಬಹುತೇಕ ಎಲ್ಲ ಟೆಲಿಕಾಂ ಕಂಪನಿ, ಡೀಲರ್, ರೀಟೇಲ್ ಮಾರಾಟಗಾರರ ಆತುರ, ವ್ಯಾಪಾರದ ಟಾರ್ಗೆಟ್ ಮುಟ್ಟುವ ಹಪಹಪಿಯ ಪರಿಣಾಮ ಈ ಎಲ್ಲ ಗೋಜಲು ಸೃಷ್ಟಿಯಾಗಿದೆ. ಮೊಬೈಲ್, ಸ್ಥಿರ ದೂರವಾಣಿ ಸಂಪರ್ಕ ಸೇವೆ ನೀಡುವ ಮುನ್ನ ಕಟ್ಟುನಿಟ್ಟಾಗಿ ದಾಖಲೆಗಳನ್ನು ಪರಿಶೀಲಿಸಿದ್ದಿದ್ದರೆ ಈ ಮರು ವಿಚಾರಣೆಯ ಅಗತ್ಯ ಇರುತ್ತಿತ್ತೇ ? ನೆವರ್.

Sunday, 25 July 2010

ಹಳ್ಳಿ ಮಾರ್ಕೆಟ್ ಗೆಲ್ಲೋದ್ ಹ್ಯಾಗೆ ?


ಇದುವರೆಗೆ ಉದ್ದಿಮೆ ವಲಯ ಹಳ್ಳಿಗಳತ್ತ ಕಣ್ಣೆತ್ತಿಯೂ ನೋಡಿರಲಿಲ್ಲ. ಆದರೆ ಕಳೆದ ಕೆಲವು ವರ್ಷಗಳಿಂದೀಚೆಗೆ ಚಿತ್ರಣ ಬದಲಾಗಿದೆ. ಕಾರ್ಪೊರೇಟ್ ವಲಯದ ಕಂಪನಿಗಳು ಹಳ್ಳಿಗಳ ವಿಶಾಲವಾದ ಮಾರುಕಟ್ಟೆಯನ್ನು ಗೆಲ್ಲುವುದು ಹೇಗೆ ಎಂಬುದರ ಬಗ್ಗೆ ಚಿಂತನೆ ನಡೆಸುತ್ತಿವೆ. ಇದಕ್ಕಾಗಿಯೇ ಕಡಿಮೆ ದರದ ಉತ್ಪನ್ನಗಳನ್ನು ಬಿಡುಗಡೆಗೊಳಿಸುತ್ತಿವೆ. ವಿಜಯ ಕರ್ನಾಟಕಕ್ಕೆ ಬರೆದ ವರದಿ ಇಲ್ಲಿದೆ. ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ

Monday, 19 July 2010


ಇಸ್ರೊ ಕೇವಲ ಬಾಹ್ಯಾಕಾಶಕ್ಕೆ ಸಂಬಂಸಿದ ಸಂಶೋಧನೆ ಮಾತ್ರ ಮಾಡುತ್ತಿಲ್ಲ. ಬಾಹ್ಯಾಕಾಶ ಉದ್ದಿಮೆಯಲ್ಲಿಯೂ ಮುಂದುವರಿಯುತ್ತಿದೆ. ಇಲ್ಲಿ ಹೂಡುವ ಕೋಟ್ಯಂತರ ರೂ. ಬಂಡವಾಳದಿಂದ ಆದಾಯವೂ ಉಂಟು. ಅದು ಹೇಗೆ ? ಇಲ್ಲಿದೆ ಮಾಹಿತಿ. ಎಕನಾಮಿಕ್ ಟೈಮ್ಸ್‌ನಲ್ಲಿ ಪ್ರಕಟಿತ ವರದಿಯ ಸಾರವನ್ನು ವಿಜಯ ಕರ್ನಾಟಕ ವಾಣಿಜ್ಯ ಪುಟಕ್ಕೆ ಬರೆದಿದ್ದು ಹೀಗೆ. ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ.

Sunday, 11 July 2010


ಮಹಾರಾಷ್ಟ್ರದ ಜಲಗಾಂವ್‌ನ ನಿರಕ್ಷರಿ ಜಹಾಂಗೀರ್ ಎಂಬಾತ ಸೆಕೆಂಡ್‌ಹ್ಯಾಂಡ್ ಸ್ಕೂಟರ್‌ಗಳನ್ನು ಬಳಸಿ ನಾನಾ ಉಪಯುಕ್ತ ಸಾಧನಗಳನ್ನು ಕಂಡುಹಿಡಿದ ಕಥೆಯಿದು. ಆತ ಶೋಧಿಸಿದ ಉಪಕರಣಗಳು ನಯ ನಾಜೂಕಿನದ್ದಲ್ಲ. ಐಶಾರಾಮಿಯಲ್ಲ. ಆದರೆ ಜನೋಪಯೋಗಿ. ಅನ್ವೇಷಣಾ ಪ್ರವೃತ್ತಿಯಿದ್ದರೆ ವ್ಯಕ್ತಿ ಹೇಗೆ ದೇಶದ ಗಮನಸೆಳೆಯಬಲ್ಲ ಎನ್ನುವುದಕ್ಕೆ ಜಹಾಂಗೀರ್ ಉದಾಹರಣೆ

Saturday, 3 July 2010

ರಾಜೀನಾಮೆ ವಾಪಸ್ ಪಡೆದ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ


ಕೊನೆಗೂ ರಾಜ್ಯದ ಜನತೆ ಸಂತಸಪಡುವ ಸುದ್ದಿ ಹೊರಬಿದ್ದಿದೆ...! ಹೌದು . ನಿಮ್ಮ ಊಹೆ ನಿಜ. ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ರಾಜೀನಾಮೆಯನ್ನು ಹಿಂತೆಗೆದುಕೊಂಡಿದ್ದಾರೆ. ಬಿಜೆಪಿಯ ಹಿರಿಯ ನೇತಾರ ಲಾಲ್ ಕೃಷ್ಣ ಆಡ್ವಾಣಿ ಅವರ ಮನವಿಗೆ ಓಗೊಟ್ಟು ಸಂತೋಷ್ ಹೆಗ್ಡೆ ತಮ್ಮ ರಾಜೀನಾಮೆಯನ್ನು ಹಿಂತೆಗೆದುಕೊಳ್ಳಲು ಒಪ್ಪಿದ್ದಾರೆ. ಲೋಕಾಯಕ್ತಕ್ಕೆ ಹೆಚ್ಚಿನ ಅಧಿಕಾರ ನೀಡುವ ಭರವಸೆಯನ್ನು ಸರಕಾರ ನೀಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಕಾನೂನು ಸಚಿವ ಸುರೇಶ್ ಕುಮಾರ್ ನಡೆಸಿದ ಸಂಧಾನ ಸಫಲವಾಗಿದೆ. ಇವೆಲ್ಲದರ ಜತೆಗೆ ರಾಜ್ಯದ ಜನತೆ ಒಕ್ಕೊರಲಿನಿಂದ ಹೇಳಿದ್ದು ಒಂದೇ..ಲೋಕಾಯಕ್ತರು ರಾಜೀನಾಮೆ ನೀಡಬಾರದು..ಬಿಜೆಪಿ ಮಾತ್ರವಲ್ಲದೆ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳ ನಾಯಕರೂ ಸಂತೋಷ್ ಹೆಗ್ಡೆಯವರಿಗೆ ರಾಜೀನಾಮೆ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದವು. ಕೇಂದ್ರ ಗೃಹಸಚಿವ ಚಿದಂಬರಂ ಕೂಡ ಮನವೊಲಿಸಿದ್ದರು. ಆದರೂ ತಮ್ಮ ನಿರ್ಧಾರದಿಂದ ಹೆಗ್ಡೆ ಹಿಂದೆ ಸರಿದಿರಲಿಲ್ಲ. ಬೀಸೊ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯುಷ್ಯ ಎಂಬಂತೆ ಸರಕಾರಕ್ಕೀಗ ಅನ್ನಿಸಿರಬಹುದು. ಆದರೆ ಇನ್ನು ಲೋಕಾಯುಕ್ತಕ್ಕೆ ನೀಡಿರುವ ಭರವಸೆಯನ್ನು ಶೀಘ್ರವೇ ಒದಗಿಸಬೇಕಾದ ಹೊಣೆ ಸರಕಾರದ ಮೇಲಿದೆ..

Thursday, 1 July 2010

ಸಾಲದ ಕನಿಷ್ಠ ಬಡ್ಡಿ ದರದಲ್ಲಿ ಬಂತು ಪಾರದರ್ಶಕತೆ


ಇದೇ ಜುಲೈ ೧ರಿಂದ ಬ್ಯಾಂಕ್‌ಗಳು ನೀಡುವ ಸಾಲದ ಬಡ್ಡಿ ದರ ನಿಗದಿಯ ಪದ್ಧತಿಯಲ್ಲಿ ಹೊಸ ಬದಲಾವಣೆ ಜಾರಿಯಾಗಿದೆ. ಹಳೆಯ ಬಿಪಿಎಲ್‌ಆರ್ ( ಬೆಂಚ್‌ಮಾರ್ಕ್ ಪ್ರೈಮ್ ಲೆಂಡಿಂಗ್ ರೇಟ್ ) ಬದಲಿಗೆ ಹೊಸ ಮೂಲ ದರ (ಬೇಸ್ ರೇಟ್ ) ವ್ಯವಸ್ಥೆ ಅನುಷ್ಠಾನವಾಗಿದೆ. ಹಾಗಾದರೆ ಏನಿದು ? ಈ ಕುರಿತ ಮಾಹಿತಿ..ವರದಿಯ ಮೇಲೆ ಕ್ಕಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತದೆ.

Monday, 28 June 2010ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ೩೦ನೇ ರಾಜ್ಯ ಸಮ್ಮೇಳನ, ಬೆಂಗಳೂರಿನ ಅರಮನೆ ಮೈದಾನದ ನಲಪಾಡ್ ಪೆವಿಲಿಯನ್‌ನಲ್ಲಿ ಜೂನ್ ೨೭ರಂದು ನಡೆಯಿತು. ಸಂಜೆ ೫ಕ್ಕೆ ಸಮಾರೋಪ ಸಮಾರಂಭದಲ್ಲಿ ರೈಲ್ವೆ ಸಚಿವ ಕೆ.ಎಚ್ ಮುನಿಯಪ್ಪ ಪ್ರಶಸ್ತಿ ಪ್ರದಾನ ಮಾಡಿದರು. ವರದಿ ಮತ್ತು ಚಿತ್ರ ಇಲ್ಲಿದೆ. ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ

Tuesday, 22 June 2010


ತನ್ನ ರಫ್ತುದಾರರನ್ನು ಉತ್ತೇಜಿಸಲು ಕರೆನ್ಸಿ ಯುವಾನ್‌ನ ವಿನಿಮಯ ದರವನ್ನು ಡಾಲರ್ ಎದುರು ಸದಾ ಕೆಳಮಟ್ಟದಲ್ಲಿ ಇಡುವುದು ಚೀನಾದ ಯುಕ್ತಿ. ಈ ಕುರಿತ ಲೇಖನ.ಲೇಖನದ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ.

Monday, 21 June 2010


ಬೆಂಗಳೂರಿನಲ್ಲಿ ನಡೆಯುತ್ತಿರುವ ಮೆಟ್ರೊ ರೈಲಿನ ವಿಚಾರ ಎಲ್ಲರಿಗೂ ಗೊತ್ತು. ಆದರೆ ಬೆಂಗಳೂರಿನಲ್ಲಿಯೇ ಮೆಟ್ರೊ ರೈಲನ್ನು ಬೆಮೆಲ್ ಉತ್ಪಾದಿಸುತ್ತಿದೆ. ಸ್ವದೇಶಿ ನಿರ್ಮಿತ ರೈಲು ಬೋಗಿಯನ್ನು ಅದು ದಿಲ್ಲಿ ಮೆಟ್ರೊಗೆ ಹಸ್ತಾಂತರಿಸಿದೆ.ಹಾಗಾದರೆ ಬೆಮೆಲ್ ಮೆಟ್ರೊ ರೈಲು ಉತ್ಪಾದನೆಗೆ ಕಲಿತದ್ದು ಹೇಗೆ ? ಇಲ್ಲಿದೆ ವಿವರ. ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ

Sunday, 20 June 2010

ಮೀಟರ್ ಡೌನ್-ರಿಕ್ಷಾದಲ್ಲಿ ಓದಿನ ಮೋಜು..


ಮುಂಬಯಿನಲ್ಲಿ ಮೂವರು ಯುವ ಉದ್ಯಮಿಗಳು ತಲಾ ೨೫ ಸಾವಿರ ರೂ. ಬಂಡವಾಳದಲ್ಲಿ ಆರಂಭಿಸಿದ ಮೀಟರ್ ಡೌನ್ ಎಂಬ ಆಟೊ ರಿಕ್ಷಾ ಮಾಸಿಕದ ಅಪರೂಪದ ಕಥನ ಇಲ್ಲಿದೆ. ಬೆಂಗಳೂರಿನಲ್ಲಿಯೂ ಇಂಥ ಪ್ರಯೋಗ ಮಾಡಬಹುದಲ್ಲವೇ..

Wednesday, 16 June 2010

ತಳ್ಳುವ ಗಾಡಿಯಲ್ಲಿ ವ್ಯಾಪಾರ ಆರಂಭಿಸಿ, ರೆಸ್ಟೊರೆಂಟ್ ಸರಣಿಯ ಒಡತಿಯಾದ ಯಶೋಗಾಥೆ


ಕಡು ಬಡತನ ಮತ್ತು ಕೌಟುಂಬಿಕ ಸಮಸ್ಯೆಗಳಿಂದ ಜರ್ಜರಿತರಾಗಿದ್ದ ಮಹಿಳೆಯೊಬ್ಬರು ತಳ್ಳುವ ಗಾಡಿಯಲ್ಲಿ ವ್ಯಾಪಾರ ಆರಂಭಿಸಿ, ಮೂರು ದಶಕದ ನಂತರ ರೆಸ್ಟೊರೆಂಟ್ ಸರಣಿಯ ಒಡತಿಯಾದ ಯಶೋಗಾಥೆ ಇಲ್ಲಿದೆ. ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯಾಧರಿಸಿದ ಕಥನವಿದು.
ಲೇಖನದ ಮೇಲೆ ಕ್ಲಿಕ್ಕಿಸಿದರೆ ದೊಡ್ದದಾಗಿ ಕಾಣಿಸುತ್ತೆ

Friday, 11 June 2010

ಆಪ ರೇಷನ್ ಕಾರ್ಡ್ ವರದಿಗೆ ಪ್ರಶಸ್ತಿ


ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ೨೦೦೮ನೇ ಸಾಲಿನ ಪ್ರಶಸ್ತಿಗಳು ಪ್ರಕಟವಾಗಿವೆ. ವಿಜಯ ಕರ್ನಾಟಕಕ್ಕೆ ೩ ಪ್ರಶಸ್ತಿಗಳು ಲಭಿಸಿವೆ. ಈ ಪೈಕಿ ನನ್ನ ವರದಿ ಆಪ ರೇಷನ್ ಕಾರ್ಡ್ ಸಹ ಒಂದು.

Wednesday, 2 June 2010

ಜಾಗತಿಕ ಹೂಡಿಕೆಗೆ ಮುನ್ನ ಅಪಸ್ವರವೇಕೆ ?ಬೆಂಗಳೂರಿನಲ್ಲಿ ಜೂನ್ ೩-೪ರಂದು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದೆ. ಈ ಪ್ರಯುಕ್ತ ವಿಜಯ ಕರ್ನಾಟಕಕ್ಕೆ ಬರೆದ ಲೇಖನ. ಲೇಖನದ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ

Thursday, 27 May 2010

ಹಳ್ಳಿಗಳಿಗೂ ೩-೪ ಸಾವಿರ ರೂ.ಗೆ ಬರಲಿದೆ ೩ಜಿ ಮೊಬೈಲ್ !
ಏರ್‌ಟೆಲ್ ಕರ್ನಾಟಕ ವೃತ್ತದ ಸಿಇಒ ವೆಂಕಟೇಶ್ ಜತೆ ನಡೆಸಿದ ಸಂದರ್ಶನ. ಚಿತ್ರ ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ

Wednesday, 26 May 2010

ರೇವಾ ಕಾರಿನ ರೂವಾರಿ ಚೇತನ್ ಮೈಣಿ


ಮಹೀಂದ್ರಾ ಆಂಡ್ ಮಹೀಂದ್ರಾ, ರೇವಾ ಎಲೆಕ್ಟ್ರಿಕ್ ಕಾರು ಕಂಪನಿಯ ಬಹುಪಾಲು ಷೇರುಗಳನ್ನು ಖರೀದಿಸಿದೆ. ಈ ಸಂದರ್ಭ ವಿಜಯ ಕರ್ನಾಟಕದಲ್ಲಿ ರೇವಾ ಕಾರಿನ ರೂವಾರಿ ಚೇತನ್ ಮೈಣಿ ಬಗ್ಗೆ ಬರೆದ ಲೇಖನ ಮತ್ತು ವರದಿ. ವರದಿ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ

Saturday, 22 May 2010

೩ಜಿ ಸ್ಪೆಕ್ಟ್ರಮ್ : ಹಣದ ಹೊಳೆ ಹರಿದು ಬಂತು, ಹೀಗೇಕಾಯಿತು ?


ಇತ್ತೀಚೆಗೆ ನಡೆದ ದೂರ ಸಂಪರ್ಕ ವಲಯದ ೩ಜಿ ಸ್ಪೆಕ್ಟ್ರಮ್ ಅಥವಾ ೩ಜಿ ತರಂಗ ಗುಚ್ಛದ ಹರಾಜಿನಿಂದ ಸರಕಾರದ ಬೊಕ್ಕಸಕ್ಕೆ ಅಂದಾಜು ೬೮ ಸಾವಿರ ಕೋಟಿ ರೂ. ಹಣದ ಹೊಳೆ ಹರಿದು ಬಂತು. ಹೀಗೇಕಾಯಿತು ? ಎಂಬುದರ ಬಗ್ಗೆ ವಿಜಯ ಕರ್ನಾಟಕಕ್ಕೆ ಬರೆದ ವರದಿ ಇಲ್ಲಿದೆ.ವರದಿಯ ಮೇಲೆ ಕ್ಕಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ

Thursday, 20 May 2010

ಗ್ರೀಸ್ ಜಾರಿದ್ದು ಹೀಗೆ..


ಯುರೋಪನ್ನು ಕಾಡುತ್ತಿರುವ ಗ್ರೀಸ್‌ನ ಆರ್ಥಿಕ ಬಿಕ್ಕಟ್ಟು ಹೇಗೆ ಸಂಭವಿಸಿತು ಎಂಬುದರ ಬಗ್ಗೆ ವಿಜಯ ಕರ್ನಾಟಕಕ್ಕೆ ಬರೆದ ವರದಿ ಇಲ್ಲಿದೆ.

Tuesday, 18 May 2010

ಗುಜರಾತ್‌ಗೆ ಐವತ್ತು, ನರೇಂದ್ರ ಮೋದಿ ಮೋಡಿಗೆ ಒಂಬತ್ತು


ಗುಜರಾತ್‌ನ ಸುವರ್ಣ ಮಹೋತ್ಸವಾಚರಣೆಯ ಉದ್ಘಾಟನಾ ಸಮಾರಂಭಕ್ಕೆ ಇತ್ತೀಚೆಗೆ ಹೋಗಿದ್ದೆ. ಅಲ್ಲಿ ಕಂಡ ನರೋಂದ್ರ ಮೋದಿಯವರ ಮೋಡಿ ಬಗ್ಗೆ...(ಚಿತ್ರ-ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ )

Monday, 12 April 2010

ಸೆಬಿ, ಐಆರ್‌ಡಿಎ ಜಟಾಪಟಿಯ ನಡುವೆ ಹೂಡಿಕೆದಾರ ಕಲಿಯಬೇಕಾದ ಪಾಠಯುಲಿಪ್ ಎಂಬ ಸಂಕೀರ್ಣ ವಿಮೆ ಉತ್ಪನ್ನದ ನಿಯಂತ್ರಣದ ವಿಚಾರದಲ್ಲಿ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ಹಾಗೂ ವಿಮೆ ಉತ್ಪನ್ನಗಳ ನಿಯಂತ್ರಕ ಐಆರ್‌ಡಿಎ ನಡುವಿನ ಮುಸುಕಿನ ಗುದ್ದಾಟ ಹಾಗೂ ಹೂಡಿಕೆದಾರರ ಗೊಂದಲದ ಕುರಿತ ವರದಿ. ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ.

Wednesday, 7 April 2010

ಬಡ್ಡಿ ಸಬ್ಸಿಡಿ ಬೇಕಿನ್ನು, ಬಡಾಯಿ ಸಾಕಿನ್ನು
ಬಜೆಟ್‌ನಲ್ಲಿ ಘೋಷಣೆಯಾಗಿ ವರ್ಷ ಉರುಳಿದ್ದರೂ, ಮತ್ತೊಂದು ಬಜೆಟ್ ಮುಗಿದರೂ ಜಾರಿಯಾಗದಿರುವ ಶೈಕ್ಷಣಿಕ ಸಾಲ ಯೋಜನೆಯೊಂದರ ಕಥೆ-ವ್ಯಥೆ. ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಈ ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸಿಕೊಳ್ಳುತ್ತೆ

Saturday, 3 April 2010

ಸಕಲೇಶಪುರದಿಂದ ಸುಬ್ರಮಣ್ಯ ರೋಡ್ ತನಕ..

ಇತ್ತೀಚೆಗೆ ಊರಿಗೆ ಹೋಗಿದ್ದಾಗ ಕಂಡ ದೃಶ್ಯಗಳಿವು. ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದಿಂದ ರೈಲು ಹತ್ತಿದ ಬಳಿಕ ಕಬಕ-ಪುತ್ತೂರು ನಿಲ್ದಾಣದಲ್ಲಿ ಇಳಿಯುವ ತನಕ ಸವಿದ ನಿಸರ್ಗದ ದೃಶ್ಯಾವಳಿಗಳಿವು. ಕೇವಲ ೯೩ ರೂ. ದರದಲ್ಲಿ ಸಿಗುವ ಪ್ರಯಾಣದ ಅನುಭವ ಮರೆಯಲಾಗದು. ಸಕಲೇಶಪುರದಿಂದ ಸುಬ್ರಮಣ್ಯ ರೋಡ್ ತನಕ ಮಾರ್ಗ ಮಧ್ಯೆ ಸಿಗುವ ಐವತ್ತಕ್ಕೂ ಹೆಚ್ಚು ಸುರಂಗಗಳು, ಘಟ್ಟದ ವೈಭವ ಅಮೋಘ. ಚಲಿಸುತ್ತಿದ್ದ ರೈಲಿನಿಂದಲೇ ಆರಾಮವಾಗಿ ಕುಳಿತುಕೊಂಡು ಸೆರೆ ಹಿಡಿದ ಚಿತ್ರಗಳಿವು.

Monday, 22 March 2010

ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣದಲ್ಲಿರುವ ಬೋನ್ಸಾಯ್ ಉದ್ಯಾನಕ್ಕೆ ಇತ್ತೀಚೆಗೆ ಹೋಗಿದ್ದಾಗ..


ಪ್ರಣಬ್‌ಗೆ ಮುಗಿ ಬಿದ್ದ ಕ್ಯಾಮೆರಾಗಳು..ಯಾಕಿಂಥಾ ಫಜೀತಿ ?


ಹಣಕಾಸು ಸಚಿವ ಪ್ರಣಬ್ ಮುಖರ್ಜಿಯವರು ಬೆಂಗಳೂರಿಗೆ ಆರ್‌ಬಿಐನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಸೋಮವಾರ ಬಂದಿದ್ದರು. (ಮಾ.೨೨) ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ಐಶಾರಾಮಿ ರಾಯಲ್ ಗಾರ್ಡೇನಿಯಾ ಹೋಟೆಲ್‌ನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ತಮ್ಮ ಭಾಷಣ ಇತ್ಯಾದಿ ಮುಗಿದ ನಂತರ ಸಚಿವರು ಬೇರೊಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದರು. ಆದರೆ ಆರ್‌ಬಿಐನ ಸಂಯೋಜಕರು ಮಾಧ್ಯಮದವರ ಜತೆ ಪ್ರಣಬ್ ಭೇಟಿ ಬಗ್ಗೆ ಸರಿಯಾದ ವ್ಯವಸ್ಥೆ ಮಾಡಿರಲಿಲ್ಲ. ಎಲ್ಲಿ, ಯಾವಾಗ ಸಚಿವರ ಜತೆ ಸಂವಹನ ನಡೆಸಬಹುದು ಎಂಬುದರ ಬಗ್ಗೆ ಪತ್ರಕರ್ತರಲ್ಲಿ ಗೊಂದಲವಿತ್ತು. ಅದಕ್ಕೆ ಸರಿಯಾಗಿ ಆರ್‌ಬಿಐನ ವಕ್ತಾರರೂ ಬೆಬ್ಬೆಬೆಬ್ಬೆ ಉತ್ತರಿಸುತ್ತಿದ್ದರು. ಕೆಲವು ಪತ್ರಕರ್ತರಿಗೆ ಸಚಿವರ ಭಾಷಣದ ಪ್ರತಿ ಸಿಕ್ಕಿತು. ಇನ್ನು ಕೆಲವರಿಗೆ ಅದೂ ಇಲ್ಲ. ಈ ನಡುವೆ ಸಚಿವರು ಸಭಾಂಗಣದಿಂದ ಹೊರ ಬರುತ್ತಿದ್ದುದೇ ತಡ, ನಾನಾ ಚಾನೆಲ್‌ಗಳ ಫೋಟೋಗ್ರಾಫರ್, ಕ್ಯಾಮರಾಮ್ಯಾನ್‌ಗಳು ಬಾಗಿಲಿನ ಬಳಿ ದಂಡುಗಟ್ಟಿದರು. ಎಲ್ಲರಿಗೂ ೫ ನಿಮಿಷವಾದರೂ ಸಚಿವರೊಡನೆ ಮಾತನಾಡುವ ಕಾತರ..ಆ ಸಂದರ್ಭದ ಚಿತ್ರವಿದು.
ಇದಕ್ಕೂ ಮುನ್ನ ಸಮಾರಂಭದಲ್ಲಿಯೂ ಅಷ್ಟೇ. ಪ್ರಣಬ್ ಕುಂತರೆ, ನಿಂತರೆ, ಕನ್ನಡಕ ತೆಗೆದು ಉಜ್ಜಿದರೆ, ಪಕ್ಕದವರ ಹತ್ತಿರ ಏನೋ ಮಾತನಾಡಿದರೆ, ಸ್ವಲ್ಪ ಅಲ್ಲಾಡಿದರೂ ಕ್ಯಾಮರಾಗಳು ಕ್ಲಿಕ್ ಕ್ಲಿಕ್..
ನೋಡಿ..ಹಣಕಾಸು ಸಚಿವರು ಬಂದರೆಂದರೆ ಮಧ್ಯಮದವರು ಹೇಗೆ ಮುಗಿಬೀಳುತ್ತಾರೆ...ಅನ್ನುತ್ತೀರಾ..ಒಂದು ರೀತಿಯಲ್ಲಿ ನೀವು ಹಾಗೆ ಅಂದುಕೊಂಡರೆ ನಿಜ. ಮಾಧ್ಯಮದವರು ಹೀಗೆ ರಾಜಕಾರಣಿಗಳ ಮುಂದೆ ಮುಗಿ ಬೀಳುವುದನ್ನು ಯಾವಾಗ ನಿಲ್ಲಿಸುತ್ತಾರೋ..ನನಗಂತೂ ಗೊತ್ತಿಲ್ಲ..

Saturday, 20 March 2010

ಕ್ರೆಡಿಟ್ ಕಾರ್ಡ್ ಕರ್ಮಕಾಂಡ( ವಿಜಯ ಕರ್ನಾಟಕದಲ್ಲಿ ೨೦೦೭ರ ಡಿಸೆಂಬರ್ ೩ ಮತ್ತು ೪ರಂದು ಪ್ರಕಟವಾದ ಲೇಖನಗಳ ಗುಚ್ಛವಿದು. ನಿಯಮಿತವಾಗಿ ನುಡಿಚೈತ್ರದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. )

ಏಯ್ ಗೂಬೆ..ನಿನ್ನಪ್ಪನ್ ಮ್ಯಾಲೆ ವಾರಂಟ್ ಐತೆ...ಇನ್ನರ್ಧ ಗಂಟೇಲಿ ಮನೆಗೆ ಬರ‍್ತೇನೆ ಆಯ್ತಾ..
ಚೆನ್ನೈನಿಂದ ಪೊಲೀಸ್ ಇನ್ಸ್‌ಪೆಕ್ಟರ್ ರಾಹುಲ್ ಮಾತಾಡ್ತಾ ಇರೋದು...ನಿಮ್ಮ ಜ್ಯೂನಿಯರ್ ಮೇಲೆ ಕ್ರಿಮಿನಲ್ ಕೇಸಿದೆ. ಹಾಫನವರಿನಲ್ಲಿ ಅರೆಸ್ಟ್ ಮಾಡಬೇಕು. ನಿಮ್ಮ ಏರಿಯಾ ಪೊಲೀಸಿನವರಿಗೆ ವಾರಂಟ್ ಕೊಟ್ಟಾಗಿದೆ...ಆರ್ ಯೂ ರೆಡಿ ?
ಕರ್ನಾಟಕ ಸೇರಿದಂತೆ ದೇಶಾದ್ಯಂತ ಖಾಸಗಿ ಹಾಗೂ ವಿದೇಶಿ ಬ್ಯಾಂಕ್‌ಗಳಿಂದ ಕ್ರೆಡಿಟ್‌ಕಾರ್ಡ್ ಸಾಲದ ಸುಳಿಯಲ್ಲಿ ಸಿಲುಕಿರುವ ಲಕ್ಷಾಂತರ ಬಳಕೆದಾರರು ಗೂಂಡಾಗಳಿಂದ ಎದುರಿಸುತ್ತಿರುವ ಬೆದರಿಕೆ ಕರೆಗಳ ಸ್ಯಾಂಪಲ್‌ಗಳಿವು. ಇನ್ನುಳಿದ ಅವಾಚ್ಯ ಮತ್ತು ಮಾನಹಾನಿಕರ ಕರೆಗಳನ್ನು ಇಲ್ಲಿ ವಿವರಿಸಲು ಸಾಧ್ಯವಿಲ್ಲ.
೧೯೯೧ರಲ್ಲಿ ಮುಕ್ತ ಆರ್ಥಿಕತೆಯ ಬಾಗಿಲನ್ನು ತೆರೆದಾಗ ಬಹು ರಾಷ್ಟ್ರೀಯ ಕಂಪನಿಗಳು ದೇಶವನ್ನು ಪ್ರವೇಶಿಸಿದವು. ನಂತರ ಒಂದೊಂದಾಗಿ ನಾನಾ ಕ್ಚೇತ್ರಗಳಲ್ಲಿ ಅಂತಹ ಕಂಪನಿಗಳ ಕ್ರಿಮಿನಲ್ ಗೇಮ್ ಆರಂಭವಾಯಿತು. ಇದರಿಂದ ಬ್ಯಾಂಕಿಂಗ್ ಕೂಡ ಹೊರತಲ್ಲ. ಹಾಗೆ ನುಸುಳಿದ ಕ್ರೆಡಿಟ್ ಕಾರ್ಡ್ ಕಂಪನಿಗಳು ಹಾಗೂ ಬ್ಯಾಂಕ್‌ಗಳು ಇದೀಗ ಕೈಗೆ ಸಿಕ್ಕಿದವರ ಬದುಕನ್ನು ಕುಟ್ಟಿ ಪುಡಿ ಮಾಡುತ್ತಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡಿ, ಸುಪ್ರೀಂಕೋರ್ಟ್ ಆದೇಶವನ್ನು ಕೂಡ ಈ ಕಂಪನಿಗಳು ಗುಡಿಸಿ ಗುಂಡಾಂತರ ಮಾಡಿವೆ. ಈ ವೈಟ್ ಕಾಲರ್ ಲೂಟಿಯ ಪರಿಣಾಮ ಮನೆ ಮಠ ಮಾರಿ ಕೈ ಚೆಲ್ಲಿರುವ ಮಂದಿಯಲ್ಲಿ ಪ್ರತಿಭಟಿಸುವ ತ್ರಾಣ ಕೂಡ ಕುಸಿದಿದೆ. ದನ ಮುಂತಾದ ಮೂಕಪಶುಗಳಂತೆ ಅವರೀಗ ಹಿಂದೆ ಬಂದರೆ ಒದೆಯಲಾರರು. ಮುಂದೆ ಬಂದರೆ ಹಾಯಲಾರರು.
ಯಾರಿದ್ದಾರೆ ಯಾರಿಲ್ಲ ?ದಂಗುಬಡಿಸುವ ವಿಷಯ ಏನೆಂದರೆ ವಂಚನೆಗೀಡಾದವರಲ್ಲಿ ಯಾರಿದ್ದಾರೆ ಯಾರಿಲ್ಲ ? ಆರಂಭದಲ್ಲಿ ಮೇಲ್ಮಧ್ಯಮ ಹಾಗೂ ಇತರ ಶ್ರೀಮಂತರಿಗೆ ಮೋಸವಾಯಿತು. ಇದೀಗ ಪರಿಸ್ಥಿತಿ ಮತ್ತೊಂದು ಕರಾಳ ಮಗ್ಗುಲಿಗೆ ಹೊರಳಿದೆ. ಸಣ್ಣ ಪುಟ್ಟ ವ್ಯಾಪಾರಿಗಳು, ವರ್ತಕರು, ಉದ್ಯಮಿಗಳು, ಲೆಕ್ಕಾಚಾರದಲ್ಲಿ ದಂತಕತೆಗಳಾಗಿರುವ ಮಾರ‍್ವಾಡಿಗಳು, ಖುದ್ದು ಬ್ಯಾಂಕ್ ವ್ಯವಸ್ಥಾಪಕರು, ಸಾಫ್ಟ್‌ವೇರ್ ತಜ್ಞರು, ಪ್ರಿನ್ಸಿಪಾಲರು, ಪತ್ರಕರ್ತರು, ಗೃಹಿಣಿಯರು, ಗಾರ್ಮೆಂಟ್ ಹುಡುಗಿಯರು, ಇತರ ವೃತ್ತಿ ನಿರತ ಮಹಿಳೆಯರು ಕಂಡರಿಯದ ಸಮಸ್ಯೆಯಿಂದ ಬಚಾವಾಗುವುದು ಹೇಗೆಂದು ಗೊತ್ತಾಗದೆ ಪರದಾಡುತ್ತಿದ್ದಾರೆ. ಕೇಳುವವರೇ ಇಲ್ಲ. ಇವರಲ್ಲಿ ಲೆಕ್ಕಕ್ಕೆ ಸಿಗದಷ್ಟು ಮಂದಿ ಮನೆಯ ಸದಸ್ಯರು ಮತ್ತು ಸ್ನೇಹಿತರಲ್ಲಿ ಹೇಳಿಕೊಳ್ಳಲು ಕೂಡ ಅಂಜುತ್ತ ಹಗಲಿರುಳು ಬ್ಲೇಡ್‌ಗೆ ತಮ್ಮನ್ನು ಒಡ್ಡಿಕೊಂಡಿದ್ದಾರೆ. ಕೆಲವರು ಕಿರುಕುಳ ತಾಳಲಾರದೆ ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇನ್ನು ಎಷ್ಟೋ ಮಂದಿ ಯತ್ನಿಸಿದ್ದಾರೆ. ಸಾಲ ವಸೂಲಿಯ ನೆಪದಲ್ಲಿ ಹೊತ್ತಲ್ಲದ ಹೊತ್ತಿನಲ್ಲಿ ಮನೆ ಬಾಗಿಲು ತಟ್ಟುವ ಪಾತಕಿಗಳಿಂದ ಅಸಂಖ್ಯಾತ ಸಂಸಾರಗಳ ನೆಮ್ಮದಿ ಸರ್ವನಾಶವಾಗಿದೆ.
ಸಾಮಾನ್ಯವಾಗಿ ಭಾರತೀಯ ಮನಸ್ಸತ್ವ ಅಪ್ಪಟ ಸಾಲ ವಿರೋಧಿ. ಇದು ಒಳ್ಳೆಯದೇ. ಆದರೆ ಒಬ್ಬ ವ್ಯಕ್ತಿ ಯಾವುದೋ ಒಂದು ಸನ್ನಿವೇಶದಲ್ಲಿ ಹಣಕಾಸು ವಿವಾದದ ಸುಳಿಗೆ ಬಿದ್ದರೆ ಆತನದ್ದೇ ಎಡವಟ್ಟು ಅಂತ ಜನ ತಲೆಗೊಂದರಂತೆ ಎಣಿಸುವುದೇ ಜಾಸ್ತಿ. ಆದ್ದರಿಂದ ಸಾಲ ಬಾಕಿ ಇದ್ದರೆ ಬ್ಯಾಂಕ್‌ನವರು ಸುಮ್ಮನೆ ಬಿಡುತ್ತಾರಾ ? ಇದನ್ನೆಲ್ಲ ಮೊದಲೇ ತಿಳಿದುಕೊಳ್ಳಬಾರದಾ ? ಎಂದು ತೋಚಿದಂತೆ ಅಂದುಕೊಂಡು ನಗುತ್ತಾರೆ. ಆದರೆ ಕೆಲಸಕ್ಕೆ ಬಾರದ ಅವಿವೇಕಿಗಳು ಮಾತ್ರ ಇಂತಹ ಕುಹಕದ ಮಾತುಗಳನ್ನಾಡಬಹುದು.
ಏಕೆಂದರೆ ವಸ್ತು ಸ್ಥಿತಿ ಬೇರೆಯೇ ಇದೆ. ದೇಶದಲ್ಲಿ ಕ್ರೆಡಿಟ್‌ಕಾರ್ಡ್‌ಗಳ ಜಾರಿಯಲ್ಲಿ ಗಂಭೀರ ಲೋಪ ದೋಷಗಳಿವೆ. ಗ್ರಾಹಕರನ್ನು ಅನಾಮತ್ತು ಕೆಡವಲು ಹತ್ತಾರು ವಾಮ ಮಾರ್ಗಗಳಿವೆ. ಯಾವತ್ತಾದರೂ ಎಡವಿ ಗುಂಡಿಗೆ ಬೀಳುವುದು ಖಚಿತ ಎಂಬುದನ್ನು ಅನಾಹುತ ಮಾಡಿಕೊಂಡವರ ವ್ಯಥೆಯ ಕಥೆಗಳು ಸಾರುತ್ತಿವೆ. ಆದ್ದರಿಂದ ಮೂಲತಃ ಹಲವಾರು ಉಪಯುಕ್ತ ಲಕ್ಷಣಗಳನ್ನು ಒಳಗೊಂಡಿರುವ ಕ್ರೆಡಿಟ್‌ಕಾರ್ಡ್ ಎಂಬ ಹಣಕಾಸು ವ್ಯವಸ್ಥೆ ಭಾರತದಲ್ಲಿ ಜಾರಿಗೆ ಬಂದ ಕೆಲವೇ ವರ್ಷಗಳಲ್ಲಿ ತೀವ್ರ ವಿವಾದ ಸೃಷ್ಟಿಸಿದೆ.
ಆರ್‌ಬಿಐ ಕೈ ಚೆಲ್ಲಿತ್ತು !ನೋಡಿ. ನಾಲ್ಕು ವರ್ಷಗಳ ಹಿಂದೆಯೇ ಕ್ರೆಡಿಟ್ ಕಾರ್ಡ್‌ಗಳ ಮೀಟರ್ ಬಡ್ಡಿ ದರದ ಮೇಲೆ ಕಡಿವಾಣ ಹಾಕಿ ದಯವಿಟ್ಟು ಮನೆಹಾಳ ಬ್ಯಾಂಕ್‌ಗಳ ಗ್ರಹಚಾರ ಬಿಡಿಸಿ ಎಂದು ಒತ್ತಾಯಿಸಿ ಆರ್‌ಬಿಐಗೆ ಬಳಕೆದಾರರು ಮನವಿ ಸಲ್ಲಿಸಿದ್ದರು.
ಪರಿಣಾಮ ? ೨೦೦೩ರ ಮೇನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೌನ ಮುರಿದು ತನ್ನ ಅಸಹಾಯಕತೆಯನ್ನು ತೋಡಿಕೊಂಡಿತು. ಸಾಲ ಹಾಗೂ ಮುಂಗಡಗಳ ಬಡ್ಡಿ ದರ ಕುರಿತು ತಾನು ಹೊರಡಿಸಿರುವ ಮಾರ್ಗದರ್ಶಿ ಸೂತ್ರಗಳು ಕ್ರೆಡಿಟ್‌ಕಾರ್ಡ್‌ಗಳಲ್ಲಿ ಪಡೆಯುವ ಸಾಲಗಳಿಗೆ ಅನ್ವಯಿಸುವುದಿಲ್ಲ. ಏಕೆಂದರೆ ಕಾರ್ಡ್ ಬಿಡುಗಡೆ ಮಾಡುವ ಬ್ಯಾಂಕ್‌ಗಳು ಒದಗಿಸುತ್ತಿರುವ ಸೇವೆ ಮತ್ತು ಸೌಲಭ್ಯಗಳಲ್ಲಿ ಏಕರೂಪತೆ ಇರುವುದಿಲ್ಲ. ಹೀಗಿದ್ದರೂ ಬ್ಯಾಂಕ್‌ಗಳು ಬಳಕೆದಾರರಿಗೆ ಅದನ್ನು ನೀಡುವ ಮುನ್ನ ಸದಸ್ಯತ್ವ, ನವೀಕರಣ, ಸೇವಾ ಶುಲ್ಕ ದಂಡ ಮತ್ತಿತರ ಷರತ್ತುಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಬೇಕು. ಹಾಗೂ ಸದ್ಯದ ಅನಿಯಂತ್ರಿತ ವ್ಯವಸ್ಥೆಯಲ್ಲಿ ಈ ಬಗ್ಗೆ ಮಧ್ಯಪ್ರವೇಶಿಸಲು ತಾನು ಬಯಸುತ್ತಿಲ್ಲ ಎಂದು ಪ್ರತಿಪಾದಿಸಿತು.
ಹೀಗೆ ನುಣುಚಿಕೊಂಡರೆ ಸಮಸ್ಯೆ ನಿಲ್ಲುತ್ತದೆಯೇ ? ಅದಾದ ನಂತರ ಪ್ರಮುಖ ನಗರಗಳಲ್ಲಿ ಮೆಲ್ಲಗೆ ಪ್ರತಿಭಟನೆ ಕಾವು ಪಡೆಯಿತು. ಸಾಲದ ಆಘಾತದಲ್ಲಿದ್ದವರು ಬೀದಿಗೆ ಇಳಿದು ಪ್ರತಿಭಟಿಸಿದರು. ಕೊನೆಗೂ ಆರ್‌ಬಿಐ ಕ್ರೆಡಿಟ್‌ಕಾರ್ಡ್ ಕುರಿತು ಮಾರ್ಗದರ್ಶಿ ಪ್ರಕಟಿಸಿತು. ಪ್ರತಿಯೊಂದಕ್ಕೂ ನೀತಿ ನಿಯಮಗಳ ಚೌಕಟ್ಟನ್ನು ನಿರೂಪಿಸಿತು. ದುರಂತ ಏನೆಂದರೆ ಅದಾವುದೂ ಕಾಗದದಲ್ಲಿ ಮಾತ್ರ ಕಾಣಿಸಿಕೊಂಡಿದ್ದು, ಈಚೆಗೆ ಬಂದಿಲ್ಲ. ಆದ್ದರಿಂದ ಬಹುರಾಷ್ಟ್ರೀಯ ಹಾಗೂ ಖಾಸಗಿ ಕಂಪನಿಗಳ ದಂಗುಬಡಿಸುವ ಹಗಲು ದರೋಡೆ ನಿಂತಿಲ್ಲ.

Tuesday, 9 March 2010

ನಾಗಾವಾರ ಎಂಬ ಪುಟ್ಟ ಹಳ್ಳಿಗೆ ಹೋಗಿದ್ದಾಗ...

ಚೆನ್ನಪಟ್ಟಣಕ್ಕೆ ಸಮೀಪವಿರುವ ನಾಗಾವಾರ ಎಂಬ ಪುಟ್ಟ ಹಳ್ಳಿಗೆ ಹೋಗಿದ್ದಾಗ ದಾರಿಯಲ್ಲಿ ಕಂಡ ದೃಶ್ಯಗಳಿವು. ಹಳ್ಳಿಯಲ್ಲಿ ಇದ್ದಷ್ಟು ಹೊತ್ತು ಇತರ ಜಗತ್ತಿನ ಜಂಜಾಟವೆಲ್ಲ ಮಂಗಮಾಯವಾಗುತ್ತದೆ. ಹಳ್ಳಿಗರ ಮುಗ್ಧತೆ, ಅತಿಥಿ ಸತ್ಕಾರ ಗುಣ ಈಗಲೂ ಉಳಿದುಕೊಂಡಿದೆ ಎಂಬುದನ್ನು ನಾಗಾವಾರದಲ್ಲಿ ಕಂಡೆ. ಆದರೆ ರೈತಾಪಿಯೊಬ್ಬ ಕರೆಂಟಿಲ್ಲದೆ ಬೆಳೆಯೆಲ್ಲ ಒಣಗಿ ಹೋಗುತ್ತಿದೆ ಎಂದು ನೋವು ತೋಡಿಕೊಂಡಾಗ ಮನಸ್ಸು ಭಾರವಾಯಿತು. ದೇವರಲ್ಲಿ ಬೇಡುವುದಿಷ್ಟೇ. ಹಳ್ಳಿಗರ ಕಷ್ಟ ಕಾರ್ಪಣ್ಯ ಪಾರು ಮಾಡು. ವಿದ್ಯುತ್ ಕೊಡು.. ಅಂತ.

Saturday, 6 March 2010

ಕೆಂಗೇರಿಯ ಶಿರ್ಕೆ ಬಡಾವಣೆಯ ಜನ ಜೀವನ-ಭಾಗ-೩
ಸಾಯಂಕಾಲ ಮಕ್ಕಳಾಟ..ಯಾವುದೋ ಮನೆಗೆ ಬಣ್ಣ ಬಳಿದ ನಂತರ ಹಿಂತಿರುಗುತ್ತಿರುವ ಪೇಂಟರ್, ಯಥಾ ಪ್ರಕಾರ ನೀರಿನ ಟ್ಯಾಂಕಿಯ ಮೇಲೆ ಪಾರಿವಾಳದ ವಿರಾಮ. ಬೆಳಗ್ಗೆ ಬಾಲ್ಕನಿಯಲ್ಲಿ ಕುಳಿತುಕೊಂಡು ವಿಜಯ ಕರ್ನಾಟಕ ಓದುತ್ತಿರುವ ಹಿರಿಯ ನಾಗರಿಕ.