Sunday 31 January 2010

ಸಭ್ಯಸಾಚಿಗಳಾಗಿ


ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಲೈಬ್ರೆರಿಯ ಬಾಗಿಲಿನಲ್ಲಿ ವಿಜಯ ಕರ್ನಾಟಕದ ‘ ಸಭ್ಯಸಾಚಿಗಳಾಗಿ’ ಕಾಲಮ್ಮಿನ ಈ ಬರಹವನ್ನು ದೊಡ್ಡದಾಗಿ ಪ್ರಕಟಿಸಿದ್ದನ್ನು ಈವತ್ತು ಕಂಡಿದ್ದೇನೆ. ಕಂಡು ಖುಷಿಯಾಗಿ ನನ್ನಲ್ಲಿದ್ದ ಕ್ಯಾಮೆರಾದಲ್ಲಿ ಸೆರೆ ಹಿಡಿದೆ.

Thursday 28 January 2010

ವಿಪ್ರೊ ಕಂಪನಿಯ ಹೊಸ ಕಂಪ್ಯೂಟರ್‌


ವಿಪ್ರೊ ಕಂಪನಿ ಹೊಸ ಕಂಪ್ಯೂಟರ್‌ನ್ನು ಬಿಡುಗಡೆಗೊಳಿಸಿದೆ. ಇದರ ವಿಶೇಷ ಏನಪ್ಪಾ ಎಂದರೆ ಇದು ಸಂಪೂರ್ಣ ಪರಿಸರಸ್ನೇಹಿ. ಸಾಮಾನ್ಯವಾಗಿ ಕಂಪ್ಯೂಟರ್ ತಯಾರಿಕೆಯಲ್ಲಿ ಪೊಲಿವಿನಾಯಿಲ್ ಕ್ಲೋರೈಡ್ (ಪಿವಿಸಿ) ಹಾಗೂ ಬ್ರೊಮಿನೇಟೆಡ್ ಫ್ಲೇಮ್ ರಿಟಾರ್ಡಂಟ್ಸ್ (ಬಿಎಫ್‌ಆರ್) ಎಂಬ ಅಪಾಯಕಾರಿ ರಾಸಾಯನಿಕ ಬಳಕೆಯಾಗುತ್ತದೆ. ಆದರೆ ವಿಪ್ರೊ ಇದೀಗ ಇವೆರಡೂ ರಾಸಾಯನಿಕಗಳಿಗೆ ಪರ್ಯಾಯ ಮಾರ್ಗವನ್ನು ಕಂಡುಹಿಡಿದಿದೆ. ಆದ್ದರಿಂದ ಈ ರಾಸಾಯನಿಕ ಅಂಶಗಳಿಂದ ಮುಕ್ತವಾಗಿರುವ ಪರಿಸರಸ್ನೇಹಿ ಕಂಪ್ಯೂಟರ್‌ನ್ನು ಕಂಪನಿ ಸಿದ್ಧಪಡಿಸಿದೆ. ಈ ಕಂಪ್ಯೂಟರನ್ನು ಪುನರ್ಬಳಕೆ ಮಾಡಬಹುದು. ಬೆಂಗಳೂರಿನಲ್ಲಿ ಈ ವಿಶಿಷ್ಟ ಕಂಪ್ಯೂಟರ್‌ನ ಬಿಡುಗಡೆಯ ವೇಳೆ ತೆಗೆದ ಚಿತ್ರವಿದು.

ಕ್ಯಾಮೆರಾ ಕಣ್ಣಲ್ಲಿ-೨




ಬೆಂಗಳೂರಿನ ಟೆಸ್ಕೊ ಕಂಪನಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರ ವೇಳೆ ಆವರಣದಲ್ಲಿ ಕಂಡ ಬೋರ್ಡ್ ಹೀಗಿತ್ತು.

ಕ್ಯಾಮೆರಾ ಕಣ್ಣಲ್ಲಿ..೧


ಟೆಸ್ಕೊ ಕಂಪನಿಯ ಆವರಣದಲ್ಲಿ ಅಲಂಕಾರಿಕ ಗಿಡಗಳನ್ನು ಟ್ರಿಮ್ ಮಾಡುತ್ತಿರುವ ಸಿಬ್ಬಂದಿ.

ಕ್ಯಾಮೆರಾ ಕಣ್ಣಲ್ಲಿ..ಪೀಠಿಕೆ

ಪತ್ರಕರ್ತನಾಗಿ ಸಾಕಷ್ಟು ಜನರನ್ನು ಸಂದರ್ಶಿಸುವ, ಸ್ಥಳಗಳಿಗೆ ಭೇಟಿ ನೀಡುವ, ಕಾರ್ಯಕ್ರಮಗಳಿಗೆ ತೆರಳುವ ಸಂದರ್ಭ ಇದ್ದೇ ಇರುತ್ತದೆ. ಅದು ನಮ್ಮ ಕರ್ತವ್ಯ ಕೂಡಾ. ದಿನ ನಿತ್ಯದ ಇಂಥ ಕೆಲಸ ಕಾರ್ಯಗಳ ಮಧ್ಯೆ ಆಕರ್ಷಿಸಿದ, ಕಣ್ಣಿಗೆ ಕಂಡ ದೃಶ್ಯಗಳನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿಯುವುದು ಇತ್ತೀಚಿನ ಹವ್ಯಾಸವಾಗಿದೆ. ಹಿಂದೆಲ್ಲ ಎಂಥಾ ಕಾರ್ಯಕ್ರಮಕ್ಕೆ ತೆರಳಿದರೂ, ವರದಿ ಮಾಡುತ್ತಿದ್ದೆ ವಿನಾ, ಕ್ಯಾಮೆರಾ ಕೈಯಲ್ಲಿ ಇರುತ್ತಿರಲಿಲ್ಲ. ಆದರೆ ಇದರಿಂದ ಎಂಥಾ ಅಪರೂಪದ ದೃಶ್ಯಗಳು, ಚಿತ್ರ ಸೆರೆ ಹಿಡಿಯಬಹುದಾಗಿದ್ದ ಅಪರೂಪದ ಸಂದರ್ಭಗಳು ಮಿಸ್ ಆಗಿವೆ ಎಂಬುದು ನನಗೆ ಚೆನ್ನಾಗಿ ಗೊತ್ತು. ಆದರೆ ಇನ್ಮುಂದೆ ಸಾಧ್ಯವಾದಷ್ಟು ಚಿತ್ರಗಳನ್ನು ತರ್‍ತೇನೆ. ಪ್ರತಿ ದಿನ ಕೂಡ ಅಪರೂಪದ ದೃಶ್ಯವನ್ನು ಸೆರೆಹಿಡಿಯಬಹುದು ಎಂಬ ಹಮ್ಮು ಇಲ್ಲಿಲ್ಲ. ಆದರೆ ಸಾಕಷ್ಟು ಸಲ ಅಂಥ ಅವಕಾಶ ಕಣ್ಣೆದುರು ಹಾದು ಹೋಗುತ್ತದೆ. ಅವುಗಳನ್ನು ಹಿಡಿದಿಡುವ ಹಾಗೂ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಹೇಗಿದೆ ಎಂದು ಪ್ರತಿಕ್ರಿಯಿಸಿದರೆ, ಸಲಹೆ ನೀಡಿದರೆ ಖುಷಿಯಾಗುತ್ತೆ. ಅಥವಾ ಸಮ್ಮನೆ ನೋಡಿದ್ರೂ ಓ.ಕೆ. ನಿಮ್ಮಿಷ್ಟ.
ಥ್ಯಾಂಕ್ಸ್.

Sunday 24 January 2010

ರೂಪಾಯಿಗೆ ಬರಲಿದೆ ಹೊಸ ಸಂಕೇತ


ರೂಪಾಯಿಗೆ ಡಾಲರ್, ಯೂರೊ, ಯೆನ್‌ಗೆ ಇರುವಂತೆ ಪ್ರತ್ಯೇಕ ಸಂಕೇತ ಅಸ್ತಿತ್ವಕ್ಕೆ ಬರಲಿದೆ. ಈ ಸಂಗತಿಯೇ ಸಾಕಷ್ಟು ಮಂದಿಗೆ ಗೊತ್ತಿಲ್ಲ. ಇದಕ್ಕಾಗಿ ಹಣಕಾಸು ಸಚಿವಾಲಯ ಸ್ಪರ್ಧೆಯನ್ನು ಏರ್ಪಡಿಸಿತ್ತು. ೨೫ ಸಾವಿರಕ್ಕೂ ಹೆಚ್ಚು ವಿನ್ಯಾಸಗಳು ಬಂದಿದ್ದವು. ರಾಜ್ಯದಿಂದಲೂ ನೂರಾರು ಮಂದಿ ಭಾಗವಹಿಸಿದ್ದರು. ಇದೀಗ ಐವರು ರಚಿಸಿದ ವಿನ್ಯಾಸ ಅಂತಿಮ ಸುತ್ತಿಗೆ ಆಯ್ಕೆಯಾಗಿವೆ. ಈ ಪ್ರಕ್ರಿಯೆಯ ಸುತ್ತ ವರದಿ.( ಚಿತ್ರ ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸಿಕೊಳ್ಳುತ್ತದೆ. )

Wednesday 20 January 2010


ರಾಜ್ಯದಲ್ಲಿ ಖಾಸಗಿ ಸಹಭಾಗಿತ್ವದ ಯೋಜನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಹಾಗಾದರೆ ಏನಿದು ? ವಿಜಯ ಕರ್ನಾಟಕದಲ್ಲಿ ಬರೆದ ವರದಿ ಇಲ್ಲಿದೆ. ಚಿತ್ರ ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತದೆ.

Sunday 17 January 2010

ಭಗವಾನ್. ಅವರ ವಿನಯ, ಸೌಜನ್ಯ



ದೊಡ್ಡ ಬಳ್ಳಾಪುರದಲ್ಲಿ ಘಾಟಿಗೇಟ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವಕ್ಕೆ ನಿನ್ನೆ ಹೋಗಿದ್ದೆ. ಚಲನಚಿತ್ರ ನಿರ್ದೇಶಕ ದೊರೈ ಭಗವಾನ್ ಸಿಕ್ಕಿದ್ದರು. ವರನಟ ಡಾ. ರಾಜ್ ಕುಮಾರ್ ಅವರ ೩೫ಕ್ಕೂ ಹೆಚ್ಚು ಚಿತ್ರಗಳ ನಿರ್ದೇಶಕರು ಭಗವಾನ್. ಅವರ ವಿನಯ, ಸೌಜನ್ಯ, ಹಿತವಾದ ಮಾತುಗಾರಿಕೆ ಎಲ್ಲರಿಗೂ ಮಾದರಿ. ಅವರೊಡನೆ ಕಳೆದ ಅಷ್ಟೂ ಹೊತ್ತು ಸ್ಮರಣೀಯ. ಅದರ ಬಗ್ಗೆ ಶೀಘ್ರವೇ ಬರೆಯುತ್ತೇನೆ.
ಭಗವಾನ್ ಸಾರ್..ನಿಮ್ಮ ಅನುಭವದಷ್ಟು ವಯಸ್ಸೂ ನನಗಾಗದಿದ್ದರೂ, ನನ್ನನ್ನೂ ಸಾರ್ ಅಂತ ಬಹುವಚನದಲ್ಲಿ ಮಾತನಾಡಿದ್ದೀರಿ. ಅದರಲ್ಲಿ ಕೃತಕತೆ ಇರಲಿಲ್ಲ. ಆಗ ಸಂಕೋಚದಿಂದ ಮುದುರುವಂತಾಗುತ್ತಿತ್ತು. ನಿಜಕ್ಕೂ ನಿಮ್ಮಿಂದ ಇಂದಿನ ಯುವ ಜನಾಂಗ ಕಲಿಯಬೇಕಾದದ್ದು ಬೆಟ್ಟದಷ್ಟಿದೆ..

Friday 15 January 2010

ಗ್ರಹಣದ ಸಂದರ್ಭ ಮನೆಯ ಪಕ್ಕದ ಮರದ ಮೇಲೆ ಹಲವು ಕಾಗೆಗಳು !




ಕಂಕಣ ಸೂರ್‍ಯ ಗ್ರಹಣದ ಸಂದರ್ಭ ಮನೆಯ ಪಕ್ಕದ ಮರದ ಮೇಲೆ ಹಲವು ಕಾಗೆಗಳು ಕೂಗುತ್ತಾ ಬಂದು ಕುಳಿತವು. ಮಧ್ಯಾಹ್ನ ೨ ಗಂಟೆಯ ವೇಳೆಯಲ್ಲಿ ! ಬಹುಶಃ ಕತ್ತಲಾಗುತ್ತಿದೆ ಎಂದು ಭಾವಿಸಿದವೋ ಏನೋ, ನಾನಂತೂ ಇದೇ ಸಮಯ ಅಂತ ಕೆಲವು ಚಿತ್ರಗಳನ್ನು ಸೆರೆ ಹಿಡಿದೆ. ಅವು ಇಂತಿವೆ.

Tuesday 12 January 2010





ಇನೋಸಿಸ್‌ನ ತ್ರೈ ಮಾಸಿಕ ಫಲಿತಾಂಶ ಕುರಿತ ವರದಿ.

ಫೇಸ್‌ಬುಕ್ ಮತ್ತು ವಿವಾದ


ಫೇಸ್‌ಬುಕ್ ಬಗ್ಗೆ ವಿಜಯ ಕರ್ನಾಟಕದಲ್ಲಿ ಬರೆದ ಜ್ಞಾನಲೋಕ. ಚಿತ್ರ ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸಿಕೊಳ್ಳುತ್ತದೆ.

Monday 4 January 2010

ಉತ್ತರ ಕರ್ನಾಟಕದಲ್ಲಿ ಆರ್ಸೆಲರ್ ಮಿತ್ತಲ್


ವಿಶ್ವದ ಅತಿ ದೊಡ್ಡ ಉಕ್ಕಿನ ಕಂಪನಿ ಆರ್ಸೆಲರ್ ಮಿತ್ತಲ್ ಉತ್ತರ ಕರ್ನಾಟಕದಲ್ಲಿ ಉಕ್ಕಿನ ಕಾರ್ಖಾನೆ ಸ್ಥಾಪಿಸಲು ಮುಂದಾಗಿದ್ದು, ಸ್ಥಳ ಸಮೀಕ್ಷೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಉಂಟಾಗಿರುವ ಇತರ ಬೆಳವಣಿಗೆ ಹಾಗೂ ಈ ಡೀಲ್ ಹೇಗೆ ಕುದುರಿತು ಎಂಬುದರ ಬಗ್ಗೆ ವಿಜಯ ಕರ್ನಾಟಕದ ವಾಣಿಜ್ಯ ಪುಟದಲ್ಲಿ ಬರೆದ ವರದಿ. ಚಿತ್ರ ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ.

Sunday 3 January 2010

ಪುಸ್ತಕ ಮೇಳದಲ್ಲಿ ಹೊಸ ತಲೆಮಾರಿನವರಿಲ್ಲ !


ಕನ್ನಡದ ಪುಸ್ತಕ ಮೇಳಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮುಂದಿನ ಪೀಳಿಗೆಯ ಮಂದಿ ಯಾಕೆ ಕಾಣಿಸುತ್ತಿಲ್ಲ ? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ವಿಜಯ ಕರ್ನಾಟಕದಲ್ಲಿ ಬರೆದ ವರದಿ ಇಲ್ಲಿದೆ. ಚಿತ್ರ, ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತದೆ.

ಪುಸ್ತಕ ಮೇಳದಲ್ಲಿ ಹೊಸ ತಲೆಮಾರಿನವರಿಲ್ಲ !
ಕನ್ನಡದ ಪುಸ್ತಕ ಮೇಳಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮುಂದಿನ ಪೀಳಿಗೆಯ ಮಂದಿ ಯಾಕೆ ಕಾಣಿಸುತ್ತಿಲ್ಲ ? ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ವಿಜಯ ಕರ್ನಾಟಕದಲ್ಲಿ ಬರೆದ ವರದಿ ಇಲ್ಲಿದೆ. ಚಿತ್ರ, ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತದೆ.

ಕನ್ನಡದ ಪುಸ್ತಕಗಳು ಖರ್ಚಾಗೋದೇ ಇಲ್ಲಾಂತ !




ಬೆಂಗಳೂರಿನ ಕೋರಮಂಗಲದ ಫೋರಂ ಶಾಪಿಂಗ್ ಮಾಲ್‌ಗೆ ಹೋಗಿದ್ದೆ. ಜಗಮಗಿಸುವ ಭವ್ಯ ಶಾಪಿಂಗ್ ಮಾಲ್ ಅದು. ನಿತ್ಯ ಸಾವಿರಾರು ಮಂದಿ ಅಲ್ಲಿಗೆ ಬೆಲ್ಲಕ್ಕೆ ಮುತ್ತಿದ ಇರುವೆಗಳಂತೆ ಧಾವಿಸುತ್ತಾರೆ. ರಜಾ ದಿನಗಳಲ್ಲಂತೂ ಕೇಳೋದೇ ಬ್ಯಾಡ. ಅಂತಹ ಶಾಪಿಂಗ್ ಮಾಲ್ ಕರ್ನಾಟಕದಲ್ಲೇ ಇದ್ದರೂ ಅಲ್ಲಿ ಕನ್ನಡದ ಗಂಧ ಗಾಳಿ ಮಾತ್ರ ಅತ್ಯಲ್ಪ. ಬಹುಶಃ ಇಲ್ಲವೇ ಇಲ್ಲ ಎಂದರೂ ತಪ್ಪಿಲ್ಲ. ಹೀಗಿರುವಾಗ ಅಲ್ಲಿನ ಪುಸ್ತಕ ವ್ಯಾಪಾರ ವಿಭಾಗದಲ್ಲಿ ಒಳ ಹೊಕ್ಕಾಗ ನನಗೆ ರೋಮಾಂಚನ ಆಯಿತು. ಯಾಕೆಂದರೆ ಅಲ್ಲಿ ಲಕ್ಷಗಟ್ಟಲೆ ಇಂಗ್ಲಿಷ್ ಪುಸ್ತಕಗಳ ನಡುವೆ ಕನ್ನಡದ ಒಂದು ಪುಸ್ತಕ ಕಾಣಿಸಿತು ! ಅದುವೇ ವಾಲ್ಮೀಕಿ ರಾಮಾಯಣ !
ವೇ. ದೊಡ್ಡಬೆಲೆ ನಾರಾಯಣ ಶಾಸ್ತ್ರಿ ಬರೆದ ಟೀಕಾ ತಾತ್ಪರ್ಯ ಸಹಿತ ಶ್ರೀ. ಮದ್ವಾಲ್ಮೀಕಿ ರಾಮಾಯಣ ಸುಂದರ ಕಾಂಡ ಪುಸ್ತಕ ಅಲ್ಲಿತ್ತು. ಅದನ್ನು ಕಂಡು ಪುಳಕಿತನಾಗುತ್ತ, ನಂತರ ಹತ್ತಿರ ನಿಂತಿದ್ದ ಸಿಬ್ಬಂದಿಯತ್ತ ಕೇಳಿದೆ..‘ ಕನ್ನಡದ ಬೇರೆ ಪುಸ್ತಕಗಳಿಲ್ಲವೇ ? ’ ಆತ ಒಂದು ಮೂಲೆಯನ್ನು ತೋರಿಸುತ್ತ ‘ ಅಲ್ಲಿದೆ ’ ಎಂದ . ಹೋಗಿ ನೋಡಿದ್ರೆ ಒಂದು ಮೂಲೆಯಲ್ಲಿ ಕಾಟಾಚಾರಕ್ಕೆ ಎಂಬಂತೆ ಒಂದಷ್ಟು ಪುಸ್ತಕಗಳನ್ನು ಪೇರಿಡಲಾಗಿತ್ತು..ಅಷ್ಟೇ...
ಯಾಕಿಂಥ ಅಸಡ್ಡೆಯಾ..ಅದೂ ಕನ್ನಡ ನಾಡಿನಲ್ಲೇ..ಅಂತ ಭಾವಿಸಿದೆ. ಏನು ಮಾಡೋದು ಅಂತ ಶಾಪಿಂಗ್ ಮಾಲಿನಿಂದ ಹೊರ ಬಂದೆ. ಮರು ದಿನ ಭೇಟಿಯಾದಾಗ ಪ್ರಕಾಶಕ ಪ್ರಕಾಶ್ ಕಂಬತ್ತಳ್ಳಿ ಜತೆ ಈ ಬಗ್ಗೆ ಪ್ರಸ್ತಾಪಿಸಿದೆ. ಅವರು ಅಂದರು- ಶಾಪಿಂಗ್ ಮಾಲ್‌ನವರಲ್ಲಿ ಹೇಳಿದ್ರೆ ಅವರು ಹೇಳೋದು ಏನೆಂದರೆ ಕನ್ನಡದ ಪುಸ್ತಕಗಳು ಖರ್ಚಾಗೋದೇ ಇಲ್ಲಾಂತ. ಖರ್ಚಾಗುವುದಿದ್ದರೆ ಅವರೂ ಇಡಲಿಕ್ಕೆ ತಯಾರಿದ್ದಾರಂತೆ ! ಆದರೆ ಖರೀದಿದಾರರೇ ಇಲ್ಲವಾದರೆ ಏನುಪಯೋಗ ! ಎಂಥ ದುರತವಲ್ಲವೇ ಇದು...ಛೇ.