
ವಿಪ್ರೊ ಕಂಪನಿ ಹೊಸ ಕಂಪ್ಯೂಟರ್‌ನ್ನು ಬಿಡುಗಡೆಗೊಳಿಸಿದೆ. ಇದರ ವಿಶೇಷ ಏನಪ್ಪಾ ಎಂದರೆ ಇದು ಸಂಪೂರ್ಣ ಪರಿಸರಸ್ನೇಹಿ. ಸಾಮಾನ್ಯವಾಗಿ ಕಂಪ್ಯೂಟರ್ ತಯಾರಿಕೆಯಲ್ಲಿ ಪೊಲಿವಿನಾಯಿಲ್ ಕ್ಲೋರೈಡ್ (ಪಿವಿಸಿ) ಹಾಗೂ ಬ್ರೊಮಿನೇಟೆಡ್ ಫ್ಲೇಮ್ ರಿಟಾರ್ಡಂಟ್ಸ್ (ಬಿಎಫ್‌ಆರ್) ಎಂಬ ಅಪಾಯಕಾರಿ ರಾಸಾಯನಿಕ ಬಳಕೆಯಾಗುತ್ತದೆ. ಆದರೆ ವಿಪ್ರೊ ಇದೀಗ ಇವೆರಡೂ ರಾಸಾಯನಿಕಗಳಿಗೆ ಪರ್ಯಾಯ ಮಾರ್ಗವನ್ನು ಕಂಡುಹಿಡಿದಿದೆ. ಆದ್ದರಿಂದ ಈ ರಾಸಾಯನಿಕ ಅಂಶಗಳಿಂದ ಮುಕ್ತವಾಗಿರುವ ಪರಿಸರಸ್ನೇಹಿ ಕಂಪ್ಯೂಟರ್‌ನ್ನು ಕಂಪನಿ ಸಿದ್ಧಪಡಿಸಿದೆ. ಈ ಕಂಪ್ಯೂಟರನ್ನು ಪುನರ್ಬಳಕೆ ಮಾಡಬಹುದು. ಬೆಂಗಳೂರಿನಲ್ಲಿ ಈ ವಿಶಿಷ್ಟ ಕಂಪ್ಯೂಟರ್‌ನ ಬಿಡುಗಡೆಯ ವೇಳೆ ತೆಗೆದ ಚಿತ್ರವಿದು.
No comments:
Post a Comment