Sunday 25 July 2010

ಹಳ್ಳಿ ಮಾರ್ಕೆಟ್ ಗೆಲ್ಲೋದ್ ಹ್ಯಾಗೆ ?


ಇದುವರೆಗೆ ಉದ್ದಿಮೆ ವಲಯ ಹಳ್ಳಿಗಳತ್ತ ಕಣ್ಣೆತ್ತಿಯೂ ನೋಡಿರಲಿಲ್ಲ. ಆದರೆ ಕಳೆದ ಕೆಲವು ವರ್ಷಗಳಿಂದೀಚೆಗೆ ಚಿತ್ರಣ ಬದಲಾಗಿದೆ. ಕಾರ್ಪೊರೇಟ್ ವಲಯದ ಕಂಪನಿಗಳು ಹಳ್ಳಿಗಳ ವಿಶಾಲವಾದ ಮಾರುಕಟ್ಟೆಯನ್ನು ಗೆಲ್ಲುವುದು ಹೇಗೆ ಎಂಬುದರ ಬಗ್ಗೆ ಚಿಂತನೆ ನಡೆಸುತ್ತಿವೆ. ಇದಕ್ಕಾಗಿಯೇ ಕಡಿಮೆ ದರದ ಉತ್ಪನ್ನಗಳನ್ನು ಬಿಡುಗಡೆಗೊಳಿಸುತ್ತಿವೆ. ವಿಜಯ ಕರ್ನಾಟಕಕ್ಕೆ ಬರೆದ ವರದಿ ಇಲ್ಲಿದೆ. ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ

Monday 19 July 2010


ಇಸ್ರೊ ಕೇವಲ ಬಾಹ್ಯಾಕಾಶಕ್ಕೆ ಸಂಬಂಸಿದ ಸಂಶೋಧನೆ ಮಾತ್ರ ಮಾಡುತ್ತಿಲ್ಲ. ಬಾಹ್ಯಾಕಾಶ ಉದ್ದಿಮೆಯಲ್ಲಿಯೂ ಮುಂದುವರಿಯುತ್ತಿದೆ. ಇಲ್ಲಿ ಹೂಡುವ ಕೋಟ್ಯಂತರ ರೂ. ಬಂಡವಾಳದಿಂದ ಆದಾಯವೂ ಉಂಟು. ಅದು ಹೇಗೆ ? ಇಲ್ಲಿದೆ ಮಾಹಿತಿ. ಎಕನಾಮಿಕ್ ಟೈಮ್ಸ್‌ನಲ್ಲಿ ಪ್ರಕಟಿತ ವರದಿಯ ಸಾರವನ್ನು ವಿಜಯ ಕರ್ನಾಟಕ ವಾಣಿಜ್ಯ ಪುಟಕ್ಕೆ ಬರೆದಿದ್ದು ಹೀಗೆ. ವರದಿಯ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತೆ.

Sunday 11 July 2010


ಮಹಾರಾಷ್ಟ್ರದ ಜಲಗಾಂವ್‌ನ ನಿರಕ್ಷರಿ ಜಹಾಂಗೀರ್ ಎಂಬಾತ ಸೆಕೆಂಡ್‌ಹ್ಯಾಂಡ್ ಸ್ಕೂಟರ್‌ಗಳನ್ನು ಬಳಸಿ ನಾನಾ ಉಪಯುಕ್ತ ಸಾಧನಗಳನ್ನು ಕಂಡುಹಿಡಿದ ಕಥೆಯಿದು. ಆತ ಶೋಧಿಸಿದ ಉಪಕರಣಗಳು ನಯ ನಾಜೂಕಿನದ್ದಲ್ಲ. ಐಶಾರಾಮಿಯಲ್ಲ. ಆದರೆ ಜನೋಪಯೋಗಿ. ಅನ್ವೇಷಣಾ ಪ್ರವೃತ್ತಿಯಿದ್ದರೆ ವ್ಯಕ್ತಿ ಹೇಗೆ ದೇಶದ ಗಮನಸೆಳೆಯಬಲ್ಲ ಎನ್ನುವುದಕ್ಕೆ ಜಹಾಂಗೀರ್ ಉದಾಹರಣೆ

Saturday 3 July 2010

ರಾಜೀನಾಮೆ ವಾಪಸ್ ಪಡೆದ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ


ಕೊನೆಗೂ ರಾಜ್ಯದ ಜನತೆ ಸಂತಸಪಡುವ ಸುದ್ದಿ ಹೊರಬಿದ್ದಿದೆ...! ಹೌದು . ನಿಮ್ಮ ಊಹೆ ನಿಜ. ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ರಾಜೀನಾಮೆಯನ್ನು ಹಿಂತೆಗೆದುಕೊಂಡಿದ್ದಾರೆ. ಬಿಜೆಪಿಯ ಹಿರಿಯ ನೇತಾರ ಲಾಲ್ ಕೃಷ್ಣ ಆಡ್ವಾಣಿ ಅವರ ಮನವಿಗೆ ಓಗೊಟ್ಟು ಸಂತೋಷ್ ಹೆಗ್ಡೆ ತಮ್ಮ ರಾಜೀನಾಮೆಯನ್ನು ಹಿಂತೆಗೆದುಕೊಳ್ಳಲು ಒಪ್ಪಿದ್ದಾರೆ. ಲೋಕಾಯಕ್ತಕ್ಕೆ ಹೆಚ್ಚಿನ ಅಧಿಕಾರ ನೀಡುವ ಭರವಸೆಯನ್ನು ಸರಕಾರ ನೀಡಿದೆ. ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಕಾನೂನು ಸಚಿವ ಸುರೇಶ್ ಕುಮಾರ್ ನಡೆಸಿದ ಸಂಧಾನ ಸಫಲವಾಗಿದೆ. ಇವೆಲ್ಲದರ ಜತೆಗೆ ರಾಜ್ಯದ ಜನತೆ ಒಕ್ಕೊರಲಿನಿಂದ ಹೇಳಿದ್ದು ಒಂದೇ..ಲೋಕಾಯಕ್ತರು ರಾಜೀನಾಮೆ ನೀಡಬಾರದು..ಬಿಜೆಪಿ ಮಾತ್ರವಲ್ಲದೆ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳ ನಾಯಕರೂ ಸಂತೋಷ್ ಹೆಗ್ಡೆಯವರಿಗೆ ರಾಜೀನಾಮೆ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದವು. ಕೇಂದ್ರ ಗೃಹಸಚಿವ ಚಿದಂಬರಂ ಕೂಡ ಮನವೊಲಿಸಿದ್ದರು. ಆದರೂ ತಮ್ಮ ನಿರ್ಧಾರದಿಂದ ಹೆಗ್ಡೆ ಹಿಂದೆ ಸರಿದಿರಲಿಲ್ಲ. ಬೀಸೊ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರ್ಷ ಆಯುಷ್ಯ ಎಂಬಂತೆ ಸರಕಾರಕ್ಕೀಗ ಅನ್ನಿಸಿರಬಹುದು. ಆದರೆ ಇನ್ನು ಲೋಕಾಯುಕ್ತಕ್ಕೆ ನೀಡಿರುವ ಭರವಸೆಯನ್ನು ಶೀಘ್ರವೇ ಒದಗಿಸಬೇಕಾದ ಹೊಣೆ ಸರಕಾರದ ಮೇಲಿದೆ..

Thursday 1 July 2010

ಸಾಲದ ಕನಿಷ್ಠ ಬಡ್ಡಿ ದರದಲ್ಲಿ ಬಂತು ಪಾರದರ್ಶಕತೆ


ಇದೇ ಜುಲೈ ೧ರಿಂದ ಬ್ಯಾಂಕ್‌ಗಳು ನೀಡುವ ಸಾಲದ ಬಡ್ಡಿ ದರ ನಿಗದಿಯ ಪದ್ಧತಿಯಲ್ಲಿ ಹೊಸ ಬದಲಾವಣೆ ಜಾರಿಯಾಗಿದೆ. ಹಳೆಯ ಬಿಪಿಎಲ್‌ಆರ್ ( ಬೆಂಚ್‌ಮಾರ್ಕ್ ಪ್ರೈಮ್ ಲೆಂಡಿಂಗ್ ರೇಟ್ ) ಬದಲಿಗೆ ಹೊಸ ಮೂಲ ದರ (ಬೇಸ್ ರೇಟ್ ) ವ್ಯವಸ್ಥೆ ಅನುಷ್ಠಾನವಾಗಿದೆ. ಹಾಗಾದರೆ ಏನಿದು ? ಈ ಕುರಿತ ಮಾಹಿತಿ..ವರದಿಯ ಮೇಲೆ ಕ್ಕಿಕ್ಕಿಸಿದರೆ ದೊಡ್ಡದಾಗಿ ಕಾಣಿಸುತ್ತದೆ.