ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸಮಾಧಿ ಸ್ಥಳ ಕೆಂಗೇರಿ ಸಮೀಪದ ಅಭಿಮಾನ್ ಸ್ಟೂಡಿಯೊದ ಆವರಣದಲ್ಲಿದೆ. ಹಿರಿಯ ನಟ ಬಾಲಣ್ಣನವರ ಸಮಾಧಿಯೂ ಅಲ್ಲಿದೆ. ಪ್ರತಿ ದಿನ ನೂರಾರು ಮಂದಿ ಅಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಅಂತಹ ಸಮಾಧಿ ಸ್ಥಳವನ್ನು ಆದಷ್ಟು ಬೇಗ ಅಭಿವೃದ್ಧಿಪಡಿಸಬೇಕು.
ಈವತ್ತು ವಿಷ್ಣುವರ್ಧನ್ ಸಮಾಧಿಗೆ ಭೇಟಿ ನೀಡಿದಾಗ ಒಂದು ಘಟನೆ ನಡೆಯಿತು. ಸಮಾಧಿಯ ಪಕ್ಕ ಛಾಯಾಚಿತ್ರಗಾರನೊಬ್ಬ ಕೂತಿದ್ದ. ಆತನ ಚೀಲವೂ ಅಲ್ಲಿತ್ತು. ನಾನು ನನ್ನಪಾಡಿಗೆ ಫೊಟೊ ಕ್ಲಿಕ್ಕಿಸಿದ ತಕ್ಷಣ " ಫೊಟೊ ತೆಗೆಯಬಾರದು. ಬೇಕಾದರೆ ನಾನೇ ತೆಗೆದುಕೊಡುತ್ತೇನೆ ಎಂದ..! " ಏನಿದು ? ಅಭಿಮಾನಿಗಳು ವಿಷ್ಣುವರ್ಧನ್ ಅವರ ಸಮಾಧಿಯ ಭಾವಚಿತ್ರವನ್ನೂ ಸೆರೆಹಿಡಿಯುವಂತಿಲ್ಲವೇ ? ಆತ ಬಹುಶಃ ತಾನೇ ಚಿತ್ರ ತೆಗೆದುಕೊಟ್ಟು ದುಡ್ಡು ಮಾಡುತ್ತಿದ್ದನೇ ? ನಾನು ವಿಚಾರಿಸಲು ಹೋಗಲಿಲ್ಲ. ಆದರೆ ಒಂದು ವೇಳೆ ಹಾಗೆ ಮಾಡುತ್ತಿದ್ದರೆ ಅದು ಶುದ್ಧ ತಪ್ಪು...
No comments:
Post a Comment