Tuesday 11 January 2011

ಮೊದಲ ಸಂಬಳ ಹೇಳಿದ INFOSYS ಸಹ ಸಂಸ್ಥಾಪಕರು, ಈಗಿನ ಸಂಬಳ ಹೇಳಲಿಲ್ಲ !


ಪತ್ರಿಕಾ ವಲಯದಲ್ಲಿ ಇರುವವರಿಗೆ ನಿತ್ಯ ವಿಭಿನ್ನ ಅನುಭವ, ಅರಿವು, ಮಾಹಿತಿ ಸಿಗುವುದು ಸಹಜ. ಪತ್ರಿಕೆಯಲ್ಲಿ ಬರೆಯದ, ಆದರೆ ಅನುಭವಕ್ಕೆ ದಕ್ಕಿದ ಕೆಲವು ಸಂಗತಿಗಳನ್ನು ನಿಮ್ಮೊಡನೆ ಹಂಚುವ ಆಸೆ. ಅದಕ್ಕೆಂದೇ ಈ ಅಂಕಣ - ಪತ್ರಿಕಾ ಅನುಭವ

ಪತ್ರಿಕಾ ಅನುಭವ-೧
ಇತ್ತೀಚೆಗೆ INFOSYS ಸಹ ಸಂಸ್ಥಾಪಕ, ಹಿರಿಯರಾದ ದಿನೇಶ್ ಅವರನ್ನು ಸಂದರ್ಶಿಸಿದ್ದೆ. ಅವರ ಸಾಧನೆ ಅನನ್ಯ ಹಾಗೂ ಸ್ಪೂರ್ತಿದಾಯಕ. ಸರಳ ವ್ಯಕ್ತಿತ್ವದ ದಿನೇಶ್ ಸಂದರ್ಶನ ಸ್ಮರಣೀಯವಾಗಿತ್ತು.
ಅಂದು ನನ್ನ ಬಳಿ ಅವರು ಮಾತನಾಡುತ್ತಾ, " ನನ್ನ ಮೊದಲ ಸಂಬಳ ೮೦ ರೂಪಾಯಿ..' ಎಂದು ಹೇಳಿದ್ದರು. ಸಂದರ್ಶನ ಮುಗಿಸಿ ಮನೆಗೆ ಬಂದಾಗ ನನ್ನಲ್ಲಿ ಮತ್ತೊಂದು ಪ್ರಶ್ನೆ ಉದ್ಭವಿಸಿತ್ತು. ಹಾಗಾದರೆ ಈಗ ಅವರ ಸಂಬಳ ಎಷ್ಟಿರಬಹುದು ? ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದೆ. ಆಗ ಅವರು ನೇರ ಉತ್ತರ ಕೊಡಲೇ ಇಲ್ಲ. ಕಂಪನಿಯ ವೆಬ್ ಸೈಟ್‌ನಲ್ಲಿ ವೇತನದ ಬಗ್ಗೆ ವಿವರ ಸಿಗುತ್ತದೆ. ಅವೆಲ್ಲ ಏಕೆ ? ಎಂದರು. ನಾನು ಪ್ರತ್ಯುತ್ತರ ಹೇಳಲು ಹೋಗಲಿಲ್ಲ.
ಬದಲಿಗೆ ಕೂಡಲೇ ವೆಬ್‌ಸೈಟ್ ತೆರೆದು ಉತ್ತರ ಪಡೆದುಕೊಂಡೆ. ಅವರ ಈಗಿನ ಸಂಬಳ ಎಷ್ಟು ಅಂತ ಲೇಖನದಲ್ಲಿ ಬರೆದೆ. ಆದರೆ ನಂತರ ನನ್ನ ಮನಸ್ಸು ಹೇಳುತ್ತಿತ್ತು. ಈ ಪುಣ್ಯಾತ್ಮರು ನನ್ನ ಮೊದಲ ಸಂಬಳವನ್ನು ಹೆಮ್ಮೆಯಿಂದ ಹೇಳಿದ್ದರು. ಈಗಿನ ಸಂಬಳ ಹೇಳಲು ಯಾಕಿಷ್ಟು ಮುಜುಗರ ? ಹೇಳಿದರೆ ಏನಾಗುತ್ತದೆ ? ಎಂಥ ವಿಪರ್ಯಾಸವಲ್ಲವೇ.

2 comments:

  1. ಕೇಶವಪ್ರಸಾದರೆ,
    ಅವರ ಈಗಿನ ಸಂಬಳವನ್ನು ನೀವು ಇಲ್ಲಿ ಕೊಟ್ಟಿಲ್ಲ. ನಾನೂ ಸಹ infosys siteಗೆ ಹೋದೆ. ಸಿಗಲಿಲ್ಲ. ದಯವಿಟ್ಟು ಅವರ ಈಗಿನ ಸಂಬಳವನ್ನು ತಿಳಿಸಿ. ಕೊನೆಯ ಪಕ್ಷ site URL ಆದರೂ ತಿಳಿಸಿ.

    ReplyDelete
  2. ಸುನಾಥ್ ಸಾರ್, ಅವರ ಈಗಿನ ವೇತನ ಪ್ಯಾಕೇಜ್ ಮೊತ್ತ ೧.೦೧ ಕೋಟಿ ರೂ.

    ReplyDelete