Friday 6 April 2012

ಬಯಸದೆಯೇ ಯಾರೂ ಒಳ್ಳೆಯರಾಗುವುದಿಲ್ಲ ಅಥವಾ ದುಷ್ಟರಾಗುವುದಿಲ್ಲ

ಸಾಮಾನ್ಯವಾಗಿ ಒಂದು ಅವಕಾಶ ತಪ್ಪಿದೊಡನೆಯೇ ಮತ್ತೊಂದು ಅವಕಾಶ ಕಾದಿರುತ್ತದೆ. ಆದರೆ ಅವಕಾಶ ಕೈತಪ್ಪಿದ ದುಃಖದಲ್ಲಿ ಅದು ಕಾಣಿಸುವುದಿಲ್ಲ.

ಅವಕಾಶಗಳು ಸಿಗದಿರುವುದು ಕೂಡ ಒಂದು ಅವಕಾಶವೇ. ಆದ್ದರಿಂದ ಅವಕಾಶ ಸಿಕ್ಕಿಲ್ಲ ಎನ್ನುವುದು ಒಂದು ಕಲ್ಪನೆಯಷ್ಟೇ. ವಾಸ್ತವವಲ್ಲ..

ಯಾರು ಅವಮಾನಿಸುತ್ತಾರೆಯೋ, ಅವರ ಬಳಿ ಜಗಳಕ್ಕೆ ಇಳಿಯಕೂಡದು. ಆದರೆ ಅವರನ್ನು ಎಂದಿಗೂ ಮರೆಯಕೂಡದು. ಅವರು ನೋಡುತ್ತಿರುವಂತೆಯೇ ಬೆಳೆಯುತ್ತಾ ಹೋಗಬೇಕು. ಇಡೀ ಬದುಕು ಉತ್ತರ ಆಗಬೇಕು. ಮಾತಲ್ಲ.

ಬ್ಯಾಂಕ್‌ಗಳು ಬಡವರಿಗೆ ಸಾಲವಾಗಿ ದುಡ್ಡು ಕೊಡುವುದಿಲ್ಲ. ಆದರೆ ಠೇವಣಿ ಇಡುವ ಶ್ರೀಮಂತರಿಗೆ ಬಡ್ಡಿ ಕೊಡುತ್ತವೆ. ಹೀಗಾಗಿ ಈವತ್ತು ಬ್ಯಾಂಕ್‌ಗಳೆಂದರೆ ದುಡ್ಡಿದ್ದವರಿಗೇ ದುಡ್ಡು ಕೊಡುವ ಹಣಕಾಸು ಸಂಸ್ಥೆಗಳಾಗಿವೆ.

ಬಡತನದಿಂದ ಆತ್ಮವಿಶ್ವಾಸದೆ ನಲುಗುತ್ತದೆ. ಆದರೆ ಬಡತನದಿಂದ ಮೇಲೆ ಬರಬೇಕಾದರೆ ಆತ್ಮವಿಶ್ವಾಸ ಅತ್ಯಂತ ಅಗತ್ಯ.

ಎಲ್ಲೋ ದೂರದಲ್ಲಿರುವ ಅವಕಾಶಗಳ ಬಗ್ಗೆ ಚಿಂತಿಸುತ್ತಾ ಕಾಲ ಹರಣ ಮಾಡುವುದರ ಬದಲಿಗೆ, ಹತ್ತಿರದ ಅವಕಾಶಗಳನ್ನು ಬಳಸಿಕೊಂಡು ಪೂರ್ಣಗೊಳಿಸಬೇಕು. ಆಗ ಮಗದೊಂದು ಅವಕಾಶ ತಾನಾಗಿಯೇ ಸೃಷ್ಟಿಯಾಗುತ್ತದೆ. ಹೊರತಾಗಿ ನನಗೆ ಅವಕಾಶ ಸಿಗುತ್ತಿಲ್ಲ ಎಂದು ಕೊರಗುವುದರಿಂದ, ಕೈಯಲ್ಲಿರುವ ಅವಕಾಶಗಳೂ ತಪ್ಪಿ ಹೋಗುತ್ತವೆ.

ಬಯಸದೆಯೇ ಯಾರೂ ಒಳ್ಳೆಯರಾಗುವುದಿಲ್ಲ ಅಥವಾ ದುಷ್ಟರಾಗುವುದಿಲ್ಲ

ಕಾಯಬೇಕು..ಶತ ಶತಮಾನಗಳ ತನಕ ಬೇಕಾದರೂ ಕಾಯುವೆ ಎನ್ನುವಷ್ಟು ದೊಡ್ಡ ತಾಳ್ಮೆ ಇರಬೇಕು. ಅಂದರೆ ಅಕ್ಷರಶಃ ನೂರು ವರ್ಷ ಕಾಯೋದು ಅಂತ ಅಲ್ಲ. ಅಂತಹ ಪರ್ವತೋಪಮ ತಾಳ್ಮೆ ಇಲ್ಲದಿದ್ದರೆ ಆರಂಭಿಕ ಅಡೆತಡೆಗಳಿಂದ ಬಲು ಬೇಗ ಹತಾಶರಾಗುವ ಸಾಧ್ಯತೆ ಇರುತ್ತದೆ. ಆದರೆ ಅಂತಹ ತಾಳ್ಮೆ ಇರುವ ವ್ಯಕ್ತಿ ಬದುಕಿನಲ್ಲಿ ಉನ್ನತ ಗುರಿಗಳನ್ನು ಸಾಧಿಸುವುದು ಶತಃಸಿದ್ಧ..

ಕಷ್ಟಕಾಲದಲ್ಲಿದ್ದಾಗ ಸ್ನೇಹಿತರು ಸಹಾಯಕ್ಕೆ ಬರುತ್ತಿಲ್ಲವೇ ? ಅವರ ವಿರುದ್ಧ ಕೋಪಿಸಿಕೊಳ್ಳದಿರಿ. ಎಲ್ಲ ಕಾಲದಲ್ಲೂ ನಿಮ್ಮ ಪರಮಾಪ್ತ ಮಿತ್ರರೆಂದರೆ ನೀವೇ.

ಸುತ್ತಮುತ್ತ ಜನ ಇದ್ದಾಗ ಹೇಗಿರುತ್ತೀರಿ ಎಂಬುದಕ್ಕಿಂತಲೂ, ಒಬ್ಬರೇ ಇದ್ದಾಗ ಹೇಗೆ ವರ್ತಿಸುತ್ತೀರಿ ? ಏನು ಯೋಚಿಸುತ್ತೀರಿ ಎಂಬುದು ಸ್ವಲ್ಪ ಹೆಚ್ಚೇ ಪ್ರಾಮುಖ್ಯತೆ ಪಡೆಯುತ್ತದೆ. ಅದುವೇ ನಿಜವಾದ ನೀವು.

3 comments:

  1. ಕಾಣದ ಯಾವುದೋ ಅವಕಾಶಕಾಗಿ ಇಡೀ ಬದುಕನ್ನು ಹಾಳು ಮಾಡಿಕೊಳ್ಳುವುದಕ್ಕಿಂತಲೂ ಇರುವುದನ್ನು ಬಳಸಿಕೊಳ್ಳೋಣ.

    ಉತ್ತಮ ಬರಹ ಸಾರ್.

    ನನ್ನ ಬ್ಲಾಗುಗಳಿಗೂ ಸ್ವಾಗತ.

    ReplyDelete
  2. ನಿಮ್ಮ ಬರಹ ಅಜ್ಞಾನದ ಕತ್ತಲನ್ನು ಹೊಡೆದೋಡಿಸುವಹಣತೆ ಯಂತಿದೆ.ಅಭಿನಂದನೆಗಳು.ನನ್ನ ಬ್ಲಾಗಿಗೊಮ್ಮೆ ಭೇಟಿ ಕೊಡಿ.

    ReplyDelete