ಕಾಸರಗೋಡಿನ ನೀರ್ಚಾಲಿನಲ್ಲಿರುವ ಮಹಾಜನ ಸಂಸ್ಕೃತ ಕಾಲೇಜಿನಲ್ಲಿ ನನ್ನ ಮಿತ್ರ ರವಿ ಶಂಕರ ದೊಡ್ಡ ಮಾಣಿ ಅಧ್ಯಾಪಕನಾಗಿದ್ದಾನೆ. ಸಲೀಸಾಗಿ ಓದಿಸಿಕೊಂಡು ಹೋಗುವ ಬರವಣಿಗೆಯ ಕಲೆ ಕೂಡ ಅವರಿಗೆ ಇದೆ. ಶಾಲೆಯಲ್ಲಿ ಬ್ಲಾಗ್ ರಚಿಸಿ ಉಪಯುಕ್ತ ಹಾಗೂ ಸ್ವಾರಸ್ಯಕರ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ. ನಾಡಿನ ಅನೇಕ ಪತ್ರಿಕೆಗಳು, ಕೇರಳದ ಪತ್ರಿಕೆಗಳು, ಟಿ.ವಿ ಚಾನೆಲ್‌ಗಳ ಗಮನವನ್ನು ಈ ಬ್ಲಾಗ್ ಸೆಳೆದಿದೆ. ಮನಸ್ಸು ಮಾಡಿದರೆ ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ಬ್ಲಾಗನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ತಾಜಾ ನಿದರ್ಶನವಿದು. ಬಯಲು ಪ್ರವಾಸದ ಅಂಗವಾಗಿ ಇತ್ತೀಚೆಗೆ ಶಾಲೆಯ ಮಕ್ಕಳು ನೀರ್ಚಾಲು ವಾಷೆ ಸತ್ಯ ನಾರಾಯಣ ಭಟ್ಟರ ಮನೆಗೆ ಹೋಗಿ ಹಳೆಯ ಕಾಲದ ಅಳತೆ ಮಾನಗಳ ಬಗ್ಗೆ ಮಾಹಿತಿ ಪಡೆದಿದ್ದರು. ಆ ಚಿತ್ರವನ್ನು ಕಂಡು ನನಗೂ ಬಾಲ್ಯದ ಶಾಲೆಯ ದಿನಗಳು ಮತ್ತು ಆವಾಗ ಕೈಗೊಳ್ಳುತ್ತಿದ್ದ ಚುಟುಕು ಪ್ರವಾಸಗಳು ನೆನಪಾದವು...ಬಿಡುವಿದ್ದಾಗ ಭೇಟಿ ಕೊಡಿ
http://mschsnirchal.blogspot.com
No comments:
Post a Comment